ತುರುವೇಕೆರೆ, ತಾಲೂಕಿನ ಮಾಯಸಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ವತಿಯಿಂದ ಮಾರಕ ರೋಗಗಳನ್ನು ತಡೆಗಟ್ಟುವ ವಿಷಯದ ಪ್ರಬಂಧ ಸ್ಪರ್ಧೆಯನ್ನು ಮಾಯಸಂದ್ರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದು,
ಹೈಸ್ಕೂಲ್ ಮಟ್ಟದ ವಿದ್ಯಾರ್ಥಿಗಳಿಗೆ ಮಾರಕ ರೋಗಗಳನ್ನು ತಡೆಗಟ್ಟುವ ಕ್ರಮ ಹೇಗೆ ಎಂಬ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು, ಇನ್ನು ಈ ಪ್ರಬಂಧ ಸ್ಪರ್ಧೆಯಲ್ಲಿ ಮಾಯಸಂದ್ರ ಹೋಬಳಿ ಮಣೆ ಚಂಡೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನೇತ್ರಾವತಿ ಉತ್ತಮ ಪ್ರಬಂಧ ಲೇಖನ ಬರೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಈ ಪ್ರಬಂಧ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಪಿ ಎನ್ ಜವರೇಗೌಡ ಇದನ್ನು ಆಯೋಜನೆ ಮಾಡಿದ್ದರು, ತೀರ್ಪುಗಾರರಾಗಿ ನಿವೃತ್ತ ಕನ್ನಡ ಪಂಡಿತರಾದ ಟಿ ಎಂ ಬಸವಲಿಂಗಯ್ಯ ಇದ್ದು, ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎನ್ ಆರ್ ಜಯರಾಮ್, ಶ್ರೀಧರ್, ಪ್ರಕಾಶ್, ಗಿರಿಧರ್ ಪಿ, ಹನುಮಂತಯ್ಯ ಸಿ ಎನ್, ನಂಜುಂಡಪ್ಪ, ಲೀಲಾವತಿ, ಮುನಿರಾಜು, ಕರಿಬಸಪ್ಪ, ಇನ್ನಿತರರು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy