nammatumakuru

    Subscribe to Updates

    Get the latest creative news from FooBar about art, design and business.

    What's Hot

    ಯುಗಾದಿ ನಂತರ ಕರ್ನಾಟಕಕ್ಕೆ ಹೊಸ ಸಿಎಂ? ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ ಮತ್ತು ಜಾಗತಿಕ ಯುದ್ಧದ ಮುನ್ಸೂಚನೆ!

    February 19, 2026

    ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹ ಧನ ನೀಡಿ: ಸಿಎಂಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಮನವಿ

    February 19, 2026

    ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ

    February 19, 2026
    Facebook Twitter Instagram
    ಟ್ರೆಂಡಿಂಗ್
    • ಯುಗಾದಿ ನಂತರ ಕರ್ನಾಟಕಕ್ಕೆ ಹೊಸ ಸಿಎಂ? ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ ಮತ್ತು ಜಾಗತಿಕ ಯುದ್ಧದ ಮುನ್ಸೂಚನೆ!
    • ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹ ಧನ ನೀಡಿ: ಸಿಎಂಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಮನವಿ
    • ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ
    • ಶ್ರೀ ಸಂತ ಸೇವಾಲಾಲ್ ರವರ ಆದರ್ಶ ತತ್ವ ಪಾಲಿಸಿ: ತಹಶೀಲ್ದಾರ್ ಕೆ.ಮಂಜುನಾಥ್
    • ಸುಳ್ಳು ಅನುಭವ ಪತ್ರ ನೀಡಿದ ಆರೋಪ: 6 ಮಂದಿ ವಿರುದ್ಧ ಕೇಸ್
    • ತುಮಕೂರು: ಕರ್ನಾಟಕ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ
    • ಸ್ವಚ್ಛತೆಯ ರಾಯಭಾರಿಗಳಾದ ಬೊಮ್ಮಲದೇವೀಪುರ ಪಂಚಾಯಿತಿಯ ಮಹಿಳಾ ಪೌರ ಕಾರ್ಮಿಕರು
    • ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್‌ ಗೆ ಅರ್ಜಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಉತ್ತರ ಕರ್ನಾಟಕದ ಚರ್ಚೆಗೆ ಎರಡು ದಿನ ಮೀಸಲಿಡಲು ಒತ್ತಾಯ
    ರಾಜ್ಯ ಸುದ್ದಿ December 27, 2022

    ಉತ್ತರ ಕರ್ನಾಟಕದ ಚರ್ಚೆಗೆ ಎರಡು ದಿನ ಮೀಸಲಿಡಲು ಒತ್ತಾಯ

    By adminDecember 27, 2022No Comments3 Mins Read
    utarakarnataka

    ಕರ್ನಾಟಕ ವಿಧಾನಮಂಡಲಗಳ 148ನೇ ಅಧಿವೇಶನವನ್ನು ಉತ್ತರ ಕರ್ನಾಟಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರಣಕ್ಕೆ ಸಹ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲಾಗುತ್ತದೆ.ಅಂತೆಯೇ ಉತ್ತರ ಕರ್ನಾಟಕ ಭಾಗದ ಹತ್ತಾರು ಸಮಸ್ಯೆ ಸವಾಲುಗಳ ಬಗ್ಗೆ ವಿಶೇಷ ಚರ್ಚೆಗೆ ಅವಕಾಶ ಮಾಡಿಕೊಡಲು ಎರಡು ದಿನ ಮೀಸಲಿಡಬೇಕು ಎಂದು ಇದೆ ವೇಳೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ಅವರು ಸಭಾಪತಿಗಳಿಗೆ ಕೋರಿದರು.

    ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅವಕಾಶ ಮಾಡಿಕೊಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಪರಿಷತ್ ಸಭಾ ನಾಯಕ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.ಗಡಿ ಪ್ರದೇಶದಲ್ಲಿನ ಸಾರ್ವಜನಿಕ ಹಿತರಕ್ಷಣೆ ಉದ್ದೇಶದಿಂದಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2022ಕ್ಕೆ ವಿಧಾನ ಪರಿಷತ್ತ್ತಿನಲ್ಲಿ ಇಂದು ಅನುಮೋದನೆ ದೊರೆಯಿತು.


    Provided by
    Provided by

    ರಾಜ್ಯ ಸರ್ಕಾರವು ನೆಲ ಜಲ ಸಂರಕ್ಷಣೆ ವಿಷಯದಲ್ಲಿ, ಕನ್ನಡಿಗರು ಮತ್ತು ಕನ್ನಡಿಗರ ಬದುಕಿನ ರಕ್ಷಣಗೆ ಸರ್ಕಾರ ಬದ್ಧವಾಗಿದೆ. ಅವಶ್ಯಕತೆ ಇದೆ ಎಂಬುದು ಕಂಡುಬಂದಲ್ಲಿ ತಾಲೂಕಿನ ಹೆಸರನ್ನು ಸೇರಿಸುವ ರಚನೆಗೆ ಅವಕಾಶವಿದೆ. ಅಂಗೀಕಾರ ರೂಪದಲ್ಲಿರುವ ಕಾಯಿದೆಯನ್ನುಪರ್ಯಾಲೋಚಿಸಬೇಕು ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ ಬಳಿಕ ಸಭಾಪತಿಗಳು ಪ್ರಸ್ತಾವನೆಯನ್ನು ಮಂಡಿಸಿ ಚರ್ಚೆಗೆ ಅವಕಾಶ ಕಲ್ಪಿಸಿದರು. ವಿಧೇಯಕವನ್ನು ಅಂಗೀಕರಿಸಲು ಸಭಾ ನಾಯಕರು ಕೋರಿದರು. ಬಳಿಕ ಸದನವು ಸರ್ವಾನುಮತದಿಂದ ವಿಧೇಯಕಕ್ಕೆ ಅನುಮೋದನೆ ನೀಡಿತು.

    ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ತಿದ್ದುಪಡಿ ವಿಧೇಯಕದ ಚರ್ಚೆಯ ಮೇಲೆ ಮಾತನಾಡಿ ಗಡಿಭಾಗದ ಪ್ರದೇಶದಲ್ಲಿ ಹೊಸದಾಗಿ ತಾಲೂಕುಗಳನ್ನು ರಚನೆ ಮಾಡುವಾಗ ಕೆಲವು ಹಳ್ಳಿಗಳ ಜನರು ತ್ರಿಶಂಕು ಸ್ಥಿತಿಗೆ ಸಿಲುಕುತ್ತಾರೆ. ಕಾಸರಗೋಡು, ಸೊಲ್ಲಾಪುರ ಸೇರಿದಂತೆ ಗಡಿಭಾಗದಲ್ಲಿ ಕನ್ನಡ ಮಾತನಾಡುವ ಜನರಿಗೆ ಸಹಾಯವಾಗುವ ಕೆಲಸ ಈ ವಿಧೇಯಕದಿಂದಾಗಬೇಕು. ಇನ್ನಷ್ಟು ಅಧ್ಯಯನ ಮಾಡಿ ಕಾಯಿದೆಗೆ ಶಕ್ತಿ ತುಂಬಬೇಕು ಎಂದು ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದರು.

    ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅತಿ ಕಡಿಮೆ ಹಣ ಮೀಸಲಿಡುತ್ತಿರುವ ಕಾರಣಕ್ಕೆ ಹೊಸ ಬಿಲ್ಲಿನ ಉದ್ದೇಶ ಈಡೇರಿಸುವಲ್ಲಿ ವಿಫಲರಾಗಿದ್ದೇವೆ. ಕಾಸರಗೋಡು ಭಾಗದಲ್ಲಿ 100 ಕನ್ನಡ ಶಾಲೆಗಳು ಮುಚ್ಚಿವೆ. ಸೊಲ್ಲಾಪುರ ಸುತ್ತಲಿನ ಪ್ರದೇಶದಲ್ಲಿ ಮಕ್ಕಳು ಹೊರಗಡೆ ಕುಳಿತು ಕಲಿಯುವ ದುಸ್ಥಿತಿಯಿದೆ. ಪ್ರಾಧಿಕಾರಕ್ಕೆ 100 ಕೋಟಿ ಅನುದಾನ ಮೀಸಲಿಟ್ಟು ಗಡಿ ಪ್ರದೇಶದಲ್ಲಿ ಶಿಕ್ಷಣ, ಪಠ್ಯ, ಗ್ರಂಥಾಲಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಉತ್ತೇಜನ ನೀಡಬೇಕು ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಥೋಡ್ ಸಲಹೆ ಮಾಡಿದರು.

    ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ, ಈ ವಿಧೇಯಕ್ಕೆ ಬರೀ ತಿದ್ದುಪಡಿ ಮಾತ್ರ ಸಾಲದು, ಹೊರದೇಶದಲ್ಲಿರುವ ಸಂಘ ಸಂಸ್ಥೆಗಳಿಗೆ ಕೊಡುವಷ್ಟೇ, ಅನುದಾನವನ್ನು ಗಡಿಯಲ್ಲಿರುವ ಕನ್ನಡಿಗರ ಹಿತ ಕಾಪಾಡುವ ನೆರೆ ರಾಜ್ಯದ ಸಂಘ ಸಂಸ್ಥೆಗಳಿಗೆ ನೀಡುಬೇಕು. ಮಸೂದೆಯಿಂದ ಗಡಿಭಾಗದ ಹಳ್ಳಿಗಳ ಅಭಿವೃದ್ಧಿಗೆ ಗಮನ ಕೊಡುವ ಕಾರ್ಯವಾಗಬೇಕು. ಕನ್ನಡದ ಬಗ್ಗೆ ಕಾಳಜಿ ಇರುವ ಸರ್ಕಾರ ಜವಾಬ್ದಾರಿ ವಹಿಸಿ ಕನ್ನಡ ಕಾವಲು ಪಡೆಯನ್ನು ಪುನರ್ರಚಿಸಬೇಕು ಎಂದು ಸಲಹೆ ಮಾಡಿದರು.

    ಬರೀ ಭಾಷಾಭಿವೃದ್ಧಿಯಾದರೆ ಸಾಲದು, 100 ಕೋಟಿ ಅನುದಾನ ಜೊತೆಗೆ ಎಲ್ಲಾ ಇಲಾಖೆಗಳಲ್ಲಿ ತಲಾ ಶೇ.5ರಷ್ಟು ಹಣ ಮೀಸಲಿಟ್ಟು ಗಡಿಭಾಗದ ಪ್ರದೇಶದಲ್ಲಿ ಶಾಲೆ, ಆಸ್ಪತ್ರೆ, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತು ಕೊಡಬೇಕು. 371 ಜೆ ಮಾದರಿಯಲ್ಲಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಗಡಿಭಾಗದ ಕನ್ನಡಿಗರಿಗೆ ಕೂಡಲೇ ಮೀಸಲು ನಿಗದಿ ಮಾಡಬೇಕು ಎಂದು ಸದಸ್ಯ ನಾಗರಾಜ ಅವರು ಸಲಹೆ ಮಾಡಿದರು.

    ಸದಸ್ಯ ಮರಿತಿಬ್ಬೇಗೌಡ ಅವರು ಮಾತನಾಡಿ, ಈ ಕಾಯಿದೆಯನ್ನು ಇನ್ನೊಮ್ಮೆ ಪರಿಶೀಲಿಸಿ, ಸರಳೀಕರಿಸಿ, ಗಡಿಭಾಗದ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ವಾಸ ಮಾಡುವ ಜನರಿಗೆ ಹಣಕಾಸಿನ ನೆರವು ಸಿಗಬೇಕು. ಅಲ್ಲಿನ ಮಕ್ಕಳು ಶೈಕ್ಷಣ ಕವಾಗಿ ಮತ್ತು ಔದ್ಯೋಗಿಕವಾಗಿ ಬೆಳೆಯುವಂತಾಗಬೇಕು ಎಂದರು.

    ಗಡಿಭಾಗದ ಜನರಿಗೆ ನಾವು ಕನ್ನಡಿಗರು ಎನ್ನುವ ಭಾವನೆ ಇದೆ. ಇದು ಹೆಮ್ಮೆಯ ವಿಷಯ. ಅವರಿಗೆ ನಾವು ಕರ್ನಾಟಕ ರಾಜ್ಯಕ್ಕೆ ಸೇರಿದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಲು, ಗಡಿಭಾಗದಲ್ಲಿ ನಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಅಂದಾಗ ಮಾತ್ರ ಅವರಲ್ಲಿ ಸುರಕ್ಷತಾ ಭಾವನೆ ಬರಲು ಸಾಧ್ಯವಾಗುತ್ತದೆ ಎಂದು ಸದಸ್ಯೆ ತೇಜಸ್ವಿನಿಗೌಡ ತಿಳಿಸಿದರು.

    ಗಡಿಭಾಗದಲ್ಲಿ ಶಾಲೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಅಲ್ಲಿನ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ವಿಶೇಷ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಬೇಕು ಎಂದು ಸದಸ್ಯರಾದ ಕೆ.ಎಸ್.ನವೀನ ಅವರು ಗೃಹ ಸಚಿವರಲ್ಲಿ ಮನವಿ ಮಾಡಿದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಯುಗಾದಿ ನಂತರ ಕರ್ನಾಟಕಕ್ಕೆ ಹೊಸ ಸಿಎಂ? ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ ಮತ್ತು ಜಾಗತಿಕ ಯುದ್ಧದ ಮುನ್ಸೂಚನೆ!

    February 19, 2026

    ವಿಜಯೇಂದ್ರ, ಅಶೋಕ್ ಮನೆ ಮುಂದೆನೇ ಕಸ ಹಾಕಿಸ್ತೀನಿ: ಡಿಸಿಎಂ ಡಿ.ಕೆ.ಶಿವಕುಮಾರ್ ತೀವ್ರ ಎಚ್ಚರಿಕೆ

    February 18, 2026

    ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ಸರ್ಕಾರದ ನಡೆ ‘ಹೇಡಿತನಕ್ಕೆ ಸಾಕ್ಷಿ’ ಎಂದು ಜೆಡಿಎಸ್ ವಾಗ್ದಾಳಿ

    February 18, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಯುಗಾದಿ ನಂತರ ಕರ್ನಾಟಕಕ್ಕೆ ಹೊಸ ಸಿಎಂ? ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ ಮತ್ತು ಜಾಗತಿಕ ಯುದ್ಧದ ಮುನ್ಸೂಚನೆ!

    February 19, 2026

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರವಾಗಿರುವ ಬೆನ್ನಲ್ಲೇ, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು…

    ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹ ಧನ ನೀಡಿ: ಸಿಎಂಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಮನವಿ

    February 19, 2026

    ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ

    February 19, 2026

    ಶ್ರೀ ಸಂತ ಸೇವಾಲಾಲ್ ರವರ ಆದರ್ಶ ತತ್ವ ಪಾಲಿಸಿ: ತಹಶೀಲ್ದಾರ್ ಕೆ.ಮಂಜುನಾಥ್

    February 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.