ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯ ಆಡಳಿತ ಬರಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಈದ್ ಮಿಲಾದ್ ಹಬ್ಬದ ವೇಳೆ ದೇಶದ ಯಾವುದೇ ಭಾಗದಲ್ಲೂ ಹಿಂದೂಗಳು ಅಶಾಂತಿ ಉಂಟುಮಾಡಿಲ್ಲ. ಆದ್ರೆ ರಾಜ್ಯದ ಮದ್ದೂರು, ನಾಗಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ದೂರಿದರು.
ಇಸ್ಲಾಂ ಧರ್ಮದಲ್ಲಿ ನಿಜವಾದ ಸೋದರತ್ವದ ಮೌಲ್ಯಗಳು ಕಾಣಿಸುತ್ತಿಲ್ಲ. ಈಗ ಕರ್ನಾಟಕದಲ್ಲಿ ಸಾಬ್ರ ಸರ್ಕಾರವೇ ಆಡಳಿತ ನಡೆಸುತ್ತಿದೆ. ನಮ್ಮ ಮುಖ್ಯಮಂತ್ರಿ ದಸರಾ ವೇಳೆ ಚಾಮುಂಡೇಶ್ವರಿಯ ಕುಂಕುಮ ಹಚ್ಚಿಕೊಳ್ಳುವುದಿಲ್ಲ, ಆದರೆ ಮುಸ್ಲಿಂ ಕಾರ್ಯಕ್ರಮಗಳಲ್ಲಿ ಟೋಪಿ ಧರಿಸಿ ಸಂತೋಷ ವ್ಯಕ್ತಪಡಿಸುತ್ತಾರೆ ಎಂದು ಟೀಕಿಸಿದರು.
2028ರಲ್ಲಿ ಸನಾತನ ಧರ್ಮ ರಕ್ಷಣೆ ಮಾಡುವ ಶಕ್ತಿಯೇ ಅಧಿಕಾರಕ್ಕೆ ಬರಬೇಕು, ಹಿಂದೂಗಳ ದೇವಾಲಯಗಳು, ಕುಂಕುಮ ಮತ್ತು ಸಂಸ್ಕೃತಿಯ ರಕ್ಷಣೆ ಅಗತ್ಯವಾಗಿದೆ. ಇನ್ನೂ ನನಗೂ ಒಂದು ಅವಕಾಶ ಕೊಡಿ ಮಾದರಿ ಆಡಳಿತ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಆಗುವ ಬಯಕೆ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC