ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸಿದ್ಧವಾಗಿದೆ. ಯುಸಿಸಿ ಕರಡು ಮಸೂದೆಯನ್ನು ಉತ್ತರಾಖಂಡ ಕ್ಯಾಬಿನೆಟ್ ಅಂಗೀಕರಿಸಿದೆ.
ಮಂಗಳವಾರ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ವಿಧೇಯಕವನ್ನು ಸದನದಲ್ಲಿ ಚರ್ಚಿಸಿ ಬಹುಮತದೊಂದಿಗೆ ಅಂಗೀಕರಿಸಲು ಮುಂದಾಗಿದ್ದು, ಫೆ.2ರಂದು ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಸಮಿತಿ ಕರಡು ವರದಿಯನ್ನು ಸರಕಾರಕ್ಕೆ ರವಾನಿಸಿತ್ತು.
ಈ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಸಂಪುಟ ಅಂಗೀಕರಿಸಿದೆ. ಉತ್ತರಾಖಂಡ ಯುಸಿಸಿಯ ಅನುಷ್ಠಾನವನ್ನು ಘೋಷಿಸಿದ ಮೊದಲ ರಾಜ್ಯವಾಗಿದೆ.


