ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೋರ್ವ ಗ್ಯಾಂಗ್ ಸ್ಟಾರ್ ನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದ್ದು, ಉತ್ತರಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡದೊಂದಿಗೆ ಮೀರಠ್ ನಲ್ಲಿ ಗುರುವಾರ ಎನ್ ಕೌಂಟರ್ ನಡೆಯಿತು.
ಕೊಲೆ, ಸುಲಿಗೆ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಗ್ಯಾಂಗ್ ಸ್ಟರ್ ಅನಿಲ್ ದುಜಾನ ಎನ್ ಕೌಂಟರ್ ನಲ್ಲಿ ಹತ್ಯೆಗೀಡಾದ ಗ್ಯಾಂಗ್ ಸ್ಟಾರ್ ಆಗಿದ್ದಾನೆ.
‘ಅನಿಲ್ ನನ್ನು ಬಂಧಿಸಲು ಮೀರಠ್ ನ ಭೋಲಾ ಜಾಲ್ ಪ್ರದೇಶಕ್ಕೆ ತೆರಳಿದ್ದ ಎಸ್ ಟಿಎಫ್ ತಂಡ ಆತನಿದ್ದ ಸ್ಥಳವನ್ನು ಸುತ್ತುವರಿದು, ಶರಣಾಗುವಂತೆ ಸೂಚಿಸಿದೆ. ಆದರೆ ಆತ ಮತ್ತು ಆತನ ತಂಡದ ಸದಸ್ಯರು ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿದಾಳಿ ನಡೆಸಿ ಆತನನ್ನು ಹತ್ಯೆ ಮಾಡಲಾಗಿದೆ’ ಎಂದು ಪೊಲೀಸರು ವಿವರಿಸಿದ್ದಾರೆ.
ಜಾಮೀನಿನ ಮೇಲೆ ಹೊರಬಂದಿದ್ದ ಅನಿಲ್, ತನ್ನ ವಿರುದ್ಧದ ಕೊಲೆ ಪ್ರಕರಣವೊಂದರ ಸಾಕ್ಷಿಗಳಿಗೆ ಜೀವ ಬೆದರಿಕೆಯೊಡ್ಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 18 ಕೊಲೆ ಪ್ರಕರಣಗಳು ಸೇರಿದಂತೆ ಅನಿಲ್ ವಿರುದ್ಧ 60 ಪ್ರಕರಣಗಳು ದಾಖಲಾಗಿದ್ದವು. ಈಚೆಗಷ್ಟೆ ತಿಹಾರ್ ಜೈಲಿನಿಂದ ಹೊರ ಬಂದಿದ್ದ ಆತ ತನ್ನ ತಂಡವನ್ನು ಮತ್ತೆ ಸಕ್ರಿಯಗೊಳಿಸಲು ಪ್ರತ್ನಿಸುತ್ತಿದ್ದ ಎಂದೂ ಹೇಳಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


