ಲಕ್ನೋ: 70ರ ವಯಸ್ಸಿನಲ್ಲಿ ಮದುವೆಯಾಗಲು ಹೊರಟ ವೈದ್ಯನಿಗೆ ಮಹಿಳೆಯೊಬ್ಬರು ಬರೋಬ್ಬರಿ1 ಕೋಟಿ 80 ಲಕ್ಷ ರೂ. ವಂಚಿಸಿದ ಘಟನೆ ಲಕ್ನೋದಲ್ಲಿ ನಡೆದಿದೆ.
ಖ್ಯಾತ ಹೃದಯ ತಜ್ಞ ವೈದ್ಯರೊಬ್ಬರು ಪತ್ನಿಯ ನಿಧನದ ಹಿನ್ನೆಲೆ ಒಂಟಿತನ ನಿವಾರಿಸಲು ಎರಡನೇ ಮದುವೆಯಾಗಲು ಮುಂದಾಗಿದ್ದಾರೆ. ಇವರು ಅಂದುಕೊಂಡಂತೆಯೇ 40 ವರ್ಷ ವಯಸ್ಸಿನ ಕ್ರಿಶ ಎಂಬ ಮಹಿಳೆ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿತ್ತು .
ಮದುವೆ ಕಥೆ ಹೇಳಿಯೇ ವೈದ್ಯನಿಂದ ಕ್ರಿಶ ಹಣ ವಸೂಲಿ ಮಾಡಲು ಆರಂಭಿದಿದ್ದು, ಬರೋಬ್ಬರಿ 1 ಕೋಟಿ 80 ಲಕ್ಷ ರೂಪಾಯಿ ಸುಲಿಗೆ ಮಾಡಿ ಪರಾರಿಯಾಗಿದ್ದಾಳೆ.
ಮಹಿಳೆ ಸಂಪರ್ಕಕ್ಕೆ ಸಿಗದೇ ಇರುವಾಗ ತಾನು ಮೋಸ ಹೋಗಿರುವುದು ವೈದ್ಯನ ಅರಿವಿಗೆ ಬಂದಿದೆ. ಬಳಿಕ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿವಾಹ ಜಾಹೀರಾತು ಮೂಲಕ ತನಗೆ ಮಹಿಳೆಯ ಪರಿಚಯವಾಗಿತ್ತು ಎಂದು ವೈದ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz