ಪಾವಗಡ : ಕೊರಟಗೆರೆ ಪಟ್ಟಣದಲ್ಲಿ ವಾಲ್ಮೀಕಿ ಜಯಂತಿಯ ಹಿಂದಿನ ದಿನ ರಾತ್ರಿ ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಪುರಸಭೆ ಇಲಾಖೆ ವಾಲ್ಮೀಕಿ ವಿಗ್ರಹ ತೆರವು ಗೊಳಿಸಿರುವುದನ್ನು ವಿರೋಧಿಸಿ ಪಾವಗಡ ಜಾಗೃತಿ ವೇದಿಕೆ ಅಧ್ಯಕ್ಷರಾದ ಲೋಕೇಶ್ ಪಾಳೇಗಾರ್ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿ, ವಾಲ್ಮೀಕಿ ಸಮಾಜಕ್ಕೆ ಶ್ರೀ ಮಹರ್ಷಿ ವಾಲ್ಮೀಕಿಗೆ ಮಾಡಿರುವ ಅಪಮಾನವನ್ನು ಖಂಡಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕೇಶ್ ಪಾಳೇಗಾರ್, ರಾಮಾಯಣ ಗ್ರಂಥವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರ ವಿಗ್ರಹವನ್ನು ತಾಲ್ಲೂಕು ಆಡಳಿತ ರಾತ್ರೋ ರಾತ್ರೋ ತೆರವುಗೊಳಿಸಿ ನಂತರ ಸಮಾಜದ ಮುಖಂಡರನ್ನು ಮನವೊಲಿಸಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಎಂದು ತಾಲೂಕ್ ಆಡಳಿತ ನಾಮಫಲಕ ಹಾಕಿ ವಾಲ್ಮೀಕಿ ನಂತರ ಮತ್ತೆ ವಿಗ್ರಹ ಹಾಗೂ ನಾಮಫಲಕ ತೆರವು ಗೊಳಿಸಿ ಇಡೀ ವಾಲ್ಮೀಕಿ ಸಮಾಜಕ್ಕೆ ಮಾಡಿರುವ ಅವಮಾನವನ್ನು ಖಂಡಿಸಿ, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ವಾಲ್ಮೀಕಿ ವಿಗ್ರಹ ಮತ್ತು ನಾಮಫಲಕವನ್ನು ಅಳವಡಿಸುವ ಕ್ರಮ ವಹಿಸುವಂತೆ ಒತ್ತಾಹಿಸಿದರು.
ಈ ಸಂದರ್ಭದಲ್ಲಿ ಸಮಾಜದ ಯುವ ಮುಖಂಡರಾದ ಈರಣ್ಣ, ಬೇಕರಿ ನಾಗರಾಜ್, ಕ .ರ .ವೇ. ಲಕ್ಶ್ಮೀನಾರಾಯಣ,ಆಟೋ ಸತ್ತಿ, ನಾಗೇಂದ್ರ, ಅಶ್ವಥ, ಮದಕರಿ ನಾಯಕ, ಭಾಸ್ಕರ್ ನಾಯಕ, ಬೆಳ್ಳಿ ಬಟ್ಲು ಬಲರಾಮ, ಮಂಜುನಾಥ, ಅನಂತಯ್ಯ, ಬಂಗೆಪ್ಪ ಹಾಗೂ ಜಾಗೃತಿ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಗೆ ಪಾವಗಡ ಸಿ .ಪಿ.ಐ. ಸುರೇಶ್ ಖುದ್ದಾಗಿ ಹಾಜರಿದ್ದು ಸೂಕ್ತ ಬಂದೋಬಸ್ತು ನಿರ್ವಹಿಸಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q