ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಯಲ್ಲಪ್ಪನಾಯಕನಹಳ್ಳಿಯಲ್ಲಿ ಭಾನುವಾರದಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಲ್ಲಪ್ಪನಾಯಕನ ಹೊಸಕೋಟೆ ಸಂಸ್ಥಾನದ ದೊರೆಗಳಾದ ರಾಜಾ ಜಯಚಂದ್ರ ರಾಜು ಮಾತನಾಡಿ ತಳ ಸಮುದಾಯದಲ್ಲಿ ಶೈಕ್ಷಣಿಕ ಪ್ರಗತಿ ಕಡಿಮೆ ಇರುತ್ತದೆ.
ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಸಾಧನವಾಗಬೇಕು. ಪ್ರತಿಯೊಂದು ಮನೆಯಲ್ಲೂ ಪೋಷಕರು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಶಿಕ್ಷಕ ಹನುಮಂತರಾಯಪ್ಪ ಮಾತನಾಡಿ ಮಹರ್ಷಿ ವಾಲ್ಮೀಕಿಯವರು ಆಯುಧವನ್ನು ತೊರೆದು ಲೇಖನಿಯನ್ನು ಹಿಡಿದು ಇಂದು ಜಗತ್ತಿಗೆ ಮೌಲ್ಯಗಳನ್ನು ನೀಡಿ ಸರ್ವಪೂಜ್ಯರಾಗಿದ್ದಾರೆ. ತನ್ನ ರಾಮಾಯಣದ ಕೃತಿಯ ಮೂಲಕ ತಂದೆ, ತಾಯಿ, ಅಕ್ಕ, ಅಣ್ಣ ತಮ್ಮ ಗುರುವು ಇತ್ಯಾದಿ ಬಂಧಗಳ ಮೌಲ್ಯಗಳನ್ನು ಪಾತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಆದಾಗಿ ಮಕ್ಕಳು ರಾಮಾಯಣದಲ್ಲಿ ಬರುವ ಪಾತ್ರಗಳನ್ನು ಅರ್ಥ ಮಾಡಿಕೊಂಡು ಅಲ್ಲಿನ ಆದರ್ಶಗಳನ್ನು ಪಾಲಿಸಿ ಉತ್ತಮ ನಾಗರೀಕರಾಗಬೇಕು ಎಂದರು.
ಜಯಂತಿಯ ಅಂಗವಾಗಿ ಮಹಿಳೆಯರು ಕಳಶ ಮತ್ತು ಕುಂಭಗಳನ್ನು ಹೊತ್ತು ಪುರಮೆರವಣಿಗೆ ನಡೆಸಿದರು.
ಇದೇ ಸಂದರ್ಭದಲ್ಲಿ ಪಿ.ಎನ್.ನಾಗರಾಜು, ರಾಜಾ, ರವಿಶಂಕರರಾಜು, ಮಾಜಿ ಗ್ರಾ.ಪಂ ಸದಸ್ಯ ಮಾರಪ್ಪ, ಎ.ಎಸ್.ಐ ನರಸಿಂಹಮೂರ್ತಿ, ಗ್ರಾ.ಪಂ ಸದಸ್ಯ ಸಾಲಿಂಗ ನಾಯಕ, ತರಕಾರಿ ತಿಮ್ಮಪ್ಪ, ಸುಬ್ಬರಾಯಪ್ಪ, ಜಿ.ಟಿ.ಹಳ್ಳಿ ಈರಪ್ಪ, ಪರಮಟ ತಿಪ್ಪೇಸ್ವಾಮಿ, ಕೆಇಬಿ ಅಶ್ವಥ್, ಪೂಲು ತಿಮ್ಮಪ್ಪ, ರಾಮಚಂದ್ರ, ರಾಮಾಂಜಪ್ಪ, ಈರಣ್ಣ, ರಮೇಶ, ಮಾರಮ್ಮನಹಳ್ಳಿ ಮಂಜುನಾಥ, ತಿಪ್ಪೇಸ್ವಾಮಿ, ಲಾಯರ್ ಚಂದ್ರಮೌಳಿ ಮತ್ತು ವಾಲ್ಮೀಕಿ ಸಂಘದ ಪದಾಧಿಕಾರಿಗಳು ಹಾಗೂ ಇತರರು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296