ತುಮಕೂರು: ಭಾಷಾಂತರ, ರೂಪಾಂತರಗಳನ್ನು ಕಂಡಿರುವ ರಾಮಾಯಣದಲ್ಲಿ ಭಾವ ಸತ್ಯವೇ ಕಾವ್ಯ ರೂಪವಾಗಿ ವಾಲ್ಮೀಕಿಯ ಕಲ್ಪನೆಯಲ್ಲಿ ರಸವತ್ತಾಗಿ, ಕವಿಯ ಧ್ವನಿಯಾಗಿ ಮಹಾಕಾವ್ಯವಾಗಿ ಮೂಡಿಬಂದಿದೆ ಎಂದು ಶತಾವಧಾನಿ ಡಾ.ಆರ್.ಗಣೇಶ್ ತಿಳಿಸಿದರು.
ತುಮಕೂರು ವಿವಿಯ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗವು ಹಾಗೂ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಸೋಮವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ‘ವಾಲ್ಮೀಕಿರಾಮಾಯಣದ ಕಾವ್ಯ ಸೌಂದರ್ಯ’ ಕುರಿತು ಮಾತನಾಡಿದರು.
ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿಸಂತೋಷ, ಸತ್ರ್ಪೇರಣೆ, ರಸ, ಧ್ವನಿಯಔಚಿತ್ಯ, ಸಮಾಧಾನ, ಧೈರ್ಯ, ಸಂಕಟ, ಶೋಕ, ಕುಟುಂಬ ವಿಸ್ತರಣೆ, ಕಾರುಣ್ಯ, ಕೃಪೆ, ಪ್ರಕೃತಿಯ ಸೌಂದರ್ಯ, ಉತ್ಪ್ರೇಕ್ಷೆ, ಕಾಲಗಳ ವರ್ಣನೆ, ಜೀವನ ಮೌಲ್ಯ, ಕಲೆ, ಆನಂದವನ್ನುಕಾಣಬಹುದು ಎಂದು ಹೇಳಿದರು.
ಹನುಮಂತ ಸೀತೆಗೆ ತುಂಬುವ ಧೈರ್ಯ ಬದುಕಿನದೃಷ್ಟಿಯನ್ನು ಸಕಾರಾತ್ಮವಾಗಿಕಾಣಲು ಸಹಕಾರಿಯಾಗುತ್ತದೆ. ರಾಮಾಯಣ ಕಾವ್ಯದ ದೃಷ್ಟಿಯಲ್ಲಿ ಸಮಾಜವನ್ನು ಬೆಸೆದು ಬಾಳುವ ರಾಮನ ಸರಳತೆಯನ್ನು ಕಾಣಬಹುದು. ನವ್ಯಕಾವ್ಯಗಳಲ್ಲಿ ಕಂಡುಬರುವ ನಿಗೂಢತೆ ರಾಮಾಯಣ ಕಾವ್ಯದಲ್ಲಿ ಇಲ್ಲದಿರುವುದರಿಂದ ಈ ಕಾವ್ಯವನ್ನು ಆಲಿಸಿದಾಗ ಧ್ವನಿಯಾಗುತ್ತದೆ, ಆಸ್ವಾದಿಸಿದಾಗ ರಸವಾಗುತ್ತದೆ ಎಂದರು.
ಸೀತೆಯನ್ನು ಅಪಹರಿಸಿದ ರಾವಣನಿಗೆ ಆಕೆಯನ್ನು ಬಲತ್ಕಾರದಿಂದ ಒಲಿಸಿಕೊಂಡು ಪ್ರಯೋಜನವಿಲ್ಲವೆಂಬ ಜ್ಞಾನೋದಯವಾಗಿರುತ್ತದೆ. ರಾಮಾಯಣ ಕಾವ್ಯದಲ್ಲಿ ವಾಚ್ಯವಾದ ನೀತಿಬೊಧನೆಗಳಿಲ್ಲ. ಅವೆಲ್ಲವೂ ಪಾತ್ರಗಳ ಸ್ವಭಾವದಲ್ಲಿಯೇ ಕಂಡು ಬರುತ್ತದೆ. ರಾಮನಿಗೆ ರಾಜ್ಯ ಕೇವಲ ಬಾಧ್ಯತೆಯಾಗಿತ್ತು ಎಂಬುದು ತಿಳಿಯುತ್ತದೆ. ವಾಲ್ಮೀಕಿಯು ಸೀತೆಯನ್ನು ವರ್ಣಿಸುವ ಬದಲು ಕಾಲಗಳ, ಪಾತ್ರಗಳ ಪರಿಧಿಯಲ್ಲಿಆಕೆಯ ದೈಹಿಕ, ಮಾನಸಿಕ ಚೆಲುವನ್ನು ವರ್ಣಿಸಿದ್ದಾನೆ ಎಂದು ತಿಳಿಸಿದರು. ಇದೇ ಸಂದರ್ಭಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಪ್ರಾಚೀನ ಕಾಲದ ಮಹಾಕವಿಗಳು ತಮ್ಮ ಕಾವ್ಯಗಳಲ್ಲಿ ವೈಜ್ಞಾನಿಕತೆಇತ್ತು. ಅವರಿಗೆ ಬಹುತೇಕ ಸಂದರ್ಭಗಳಲ್ಲಿ ಪ್ರಕೃತಿಯೇ ಪ್ರಯೋಗಾಲಯವಾಗಿತ್ತು. ಆರೋಗ್ಯಕರ ಪರಿಸರಉತ್ತಮ ಆಲೋಚನೆಗಳನ್ನು ರೂಪಿಸುತ್ತದೆ ಎಂದು ತಿಳಿಸಿದರು.
ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ.,ಸ್ನಾತಕೋತ್ತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ.ಎಚ್.ಕೆ.ಶಿವಲಿಂಗಸ್ವಾಮಿ, ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx