ಪಾವಗಡ: ಕರ್ನಾಟಕ ರಾಜ್ಯ ದಕ್ಷಿಣ ಭಾರತದ ಐತಿಹಾಸಿಕ ಪವಿತ್ರ ಪುಣ್ಯಭೂಮಿ ನಿಡಗಲ್ಲು ದುರ್ಗದ ಶ್ರೀರಾಮತೀರ್ಥ ಬಳಿ ನಿಡಗಲ್ಲು ಉತ್ಸವ ಕಾರ್ಯಕ್ರಮ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ, ವಾಲ್ಮೀಕಿ ಜಾಗೃತಿ ವೇದಿಕೆ ನಿಡಗಲ್ಲು ಹಾಗೂ ದೇವರಾಯನರೋಪ್ಪ ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಿಡಗಲ್ ದುರ್ಗದ ಅಭಿಮಾನಿಗಳ ವತಿಯಿಂದ ಹಮ್ಮಿಕೊಳ್ಳಲಾಗಿತ್ತು
ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ 2025ರ ನಿಡಗಲ್ಲು ಕಲಾವಿದರ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಐತಿಹಾಸಿಕ ಹಿನ್ನೆಲೆ ಉಳ್ಳ ಪವಿತ್ರ ಪುಣ್ಯ ಭೂಮಿ. ರಾಜ ಮಹಾರಾಜರು ಪಾಳೆಗಾರರು ಆಳ್ವಿಕೆ ನಡೆಸಿದ ಪವಿತ್ರ ನೆಲ. ಸಾಧು ಸಂತರು ತಪೋಗೈದ ಪುಣ್ಯಭೂಮಿ ಇಂತಹ ಐತಿಹಾಸಿಕ ನಿಡಗಲ್ ದುರ್ಗದ ಉತ್ಸವವನ್ನು ಸರ್ಕಾರದ ವತಿಯಿಂದ ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ವಾರದಲ್ಲಿ ಆಚರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಉತ್ಸವ ಸಮಿತಿ ಸಂಚಾಲಕರಾದ ಪಾಳೇಗಾರ್ ಲೋಕೇಶ್ ಮಾತನಾಡಿ, ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರ ವಿವಿಧ ಸಂಘ–ಸಂಸ್ಥೆಗಳೊಂದಿಗೆ ನಿಡಗಲ್ಲು ಉತ್ಸವವನ್ನ ಆಚರಿಸುತ್ತಿದ್ದು ಪ್ರತಿ ವರ್ಷವೂ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಿ ಸರ್ಕಾರದ ವತಿಯಿಂದ ಆಚರಿಸುವ ಭರವಸೆ ನೀಡುತ್ತಿದ್ದು, ಭರವಸೆ ಭರವಸೆಯಾಗಿ ಉಳಿಯುತ್ತಿದೆ, ದಯವಿಟ್ಟು ಜನಪ್ರತಿನಿಧಿಗಳು ಸರ್ಕಾರ ಮುಂದೆ ಬಂದು ನಿಡಗಲ್ ದುರ್ಗದ ಉತ್ಸವವನ್ನು ಸರ್ಕಾರದ ವತಿಯಿಂದ ಆಚರಿಸಬೇಕು ಹಾಗೂ ನಿಡಗಲ್ ದುರ್ಗವನ್ನು ಪ್ರವಾಸೋದ್ಯಮ ಕೇಂದ್ರ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ನಿಡಗಲ್ಲು ದುರ್ಗದಲ್ಲಿ ಜಾತ್ರೆ ಪ್ರಯುಕ್ತ ಶ್ರೀ ಕ್ಷೇತ್ರ ರಾಮತೀರ್ಥ. ಶ್ರೀ ರಾಮಲಿಂಗೇಶ್ವರ ದೇವಸ್ಥಾನ. ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ. ನರಸಿಂಹ ಸ್ವಾಮಿ ದೇವಸ್ಥಾನ ವಿವಿಧ ದೇವಸ್ಥಾನಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ ಶಿವಣ್ಣ, ನವೀನ್ ಕಿಲಾರ್ಲ ಹಳ್ಳಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಶಿವಪ್ಪ, ಕಾರ ನಾಗಪ್ಪ, ಓಂಕಾರ ನಾಯಕ, ಜಗದೀಶ್, ಬೆಳ್ಳಿ ಬಟ್ಟಲು ಬಲರಾಮ್, ತಿಮ್ಮಯ್ಯ, ನಿವೃತ್ತ ಸೈನಿಕ ಅನಂತಯ್ಯ, ಮಂಜುನಾಥ್ ರವಿಕುಮಾರ್, ಮಹಾರಾಜ್, ಪಾಲಾಕ್ಷ, ನಿಡಗಲ್ಲು ಮಂಜುನಾಥ್, ಕಾಮರಾಜ್ ಮುಂತಾದವರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ, ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC