ಕೇಂದ್ರ ಬಜೆಟ್ ಮಂಡನೆ ಹಿನ್ನೆಲೆಯಲ್ಲಿಯೇ ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯನ್ನು ತೈಲ ಕಂಪೆನಿಗಳು ಇಳಿಕೆ ಮಾಡಿವೆ. ಇಂದಿನಿಂದ 19 ಕೆಜಿ ತೂಕದ ವಾಣಿಜ್ಯಸಿಲಿಂಡರ್ ಬೆಲೆಯನ್ನು 91.50 ರೂ. ನಷ್ಟು ಇಳಿಕೆ ಮಾಡಲಾಗಿದೆ.
ಹೊಸ ವರ್ಷದ ಮೊದಲ ದಿನದಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ನೂರು ರೂ.ಗಳಷ್ಟು ಇಳಿಕೆ ಮಾಡಲಾಗಿತ್ತು. ಈಗ 91ರೂ. ಕಡಿತಗೊಳಿಸಲಾಗಿದ್ದು, ಒಟ್ಟಾರೆ 191 ರೂ.ಗಳಷ್ಟು ಬೆಲೆ ಇಳಿಕೆಯಾದಂತಾಗಿದೆ. 14.2 ಕೆಜಿ ತೂಕದ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB