ನಟಿ ಅಭಿನಯ ತಾಯಿ ಜಯಮ್ಮ ಸೋದರ ಚಲುವರಾಜುಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣ ಕುರಿತು ಸೇಷನ್ಸ್ ಕೋರ್ಟ್ ನೀಡಿದ್ದ ತೀರ್ಪನ್ನ ಹೈಕೋರ್ಟ್ ಎತ್ತಿಹಿಡಿದು ನಟ ಅಭಿನಯ ಮತ್ತು ಕುಟುಂಬಕ್ಕೆ ಜೈಲು ಶಿಕ್ಷೆ ವಿಧಿಸಿತ್ತು.
ಹೈಕೋರ್ಟ್ ತೀರ್ಪನ್ನ ಪ್ರಶ್ನಿಸಿ ಜಾಮೀನು ಕೋರಿ ನಟಿ ಅಭಿನಯ ಸುಪ್ರೀಂಕೋರ್ಟ್ ಗೆ ಮೊರೆ ಹೋಗಿದ್ದರು. ಇದೀಗ ಮೂವರಿಗೂ ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದೆ.
ನಟಿ ಅಭಿನಯ ಅವರ ಅತ್ತಿಗೆ ಹಾಗೂ ಅವರ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 2012ರಲ್ಲಿ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಐವರು ಆರೋಪಿಗಳಿಗೆ (ಜಯಮ್ಮ, ಅಭಿನಯ, ಶ್ರೀನಿವಾಸ್, ರಾಮಕೃಷ್ಣ ಮತ್ತು ಚೆಲುವರಾಜು) 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ಖುಲಾಸೆಯಾಗಿ ಹೊರಬಂದಿದ್ದರು. ಇದನ್ನು ಮರು ಪ್ರಶ್ನಿಸಿದ್ದ ಲಕ್ಷ್ಮಿದೇವಿ, ಹೈಕೋರ್ಟ್ ಮೊರೆ ಹೋಗಿದ್ದರು. ಮೇಲ್ಮನವಿ ವಿಚಾರಣೆ ಮಾಡಿದ ಕೋರ್ಟ್, ಬದುಕಿರುವ ಮೂವರು ಆರೋಪಿಗಳಿಗೆ (ಜಯಮ್ಮ, ಅಭಿನಯ, ಚೆಲುವರಾಜು) ಶಿಕ್ಷೆ ಜೊತೆಗೆ ದಂಡವನ್ನೂ ವಿಧಿಸಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


