ಬೆಂಗಳೂರು: ದೇವನಹಳ್ಳಿಯ ವಿಜಿಪುರ ಗ್ರಾಮದ ಮಾಧುರಿ (26)ಎಂಬ ಮಹಿಳೆ ವರದಕ್ಷಿಣೆ ಕಿರುಕುಳ ತಾಳದೇ ರಾಸಾಯನಿಕ ಕುಡಿದು ಸಾವನ್ನಪ್ಪಿದ ಘಟನೆ ನಡೆದಿದೆ.
ಈಕೆ ಬೆಂಗಳೂರಿನ ತೂಬರಹಳ್ಳಿಯ ನಿವಾಸಿ ಗುರುಪ್ರಸಾದ್ ಜತೆ 2016ರಲ್ಲಿ ಮದುವೆಯಾಗಿದ್ದಳು. ಈ ದಂಪತಿಗೆ ಆರು ವರ್ಷದ ಒಬ್ಬ ಪುತ್ರ ಕೂಡ ಇದ್ದಾನೆ.
ವೃತ್ತಿಯಲ್ಲಿ ಪತಿ ಗುರುಪ್ರಸಾದ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ಮಾಧುರಿ ಗರ್ಭಿಣಿಯಾದಾಗಿನಿಂದ ಗುರುಪ್ರಸಾದ್ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಆತನಿಗೆ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ.
ಜನವರಿ 25ರಂದು ಮಾಧುರಿ ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಮನೆಯವರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇನ್ನೂ ಈ ಬಗ್ಗೆ ಪೊಲೀಸರು ಮಾಧುರಿಯಿಂದ ಜನವರಿ 26ರಂದು ಹೇಳಿಕೆ ಪಡೆದುಕೊಂಡಿದ್ದರು. ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಮಹಿಳೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮೃತಳ ದೂರಿನ ಹಿನ್ನೆಲೆಯಲ್ಲಿ ವರ್ತೂರು ಠಾಣೆಯಲ್ಲಿ ಗುರುಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


