ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ಪುಷ್ಕರಣಿ ಮಧ್ಯಭಾಗದಲ್ಲಿರುವ ಕಟ್ಟೆಯ ಕೆಳಭಾಗದಲ್ಲಿ ವರುಣ ದೇವರ ಶಿಲಾಮಯ ಪೀಠವೊಂದು ಪತ್ತೆ ಆಗಿದೆ ಇದು ಜನರಲ್ಲಿ ಸಂಚಲನ ಮೂಡಿಸಿದೆ.
ಈಗಾಗಲೇ ಪುಷ್ಕರಣಿಯ ಮಧ್ಯಭಾಗದಲ್ಲಿರುವ ಕಟ್ಟೆಯನ್ನು ತೆಗೆಯಾಲಾಗಿದ್ದು, ನೂತನ ಶಿಲಾಮಯ ಕಟ್ಟೆಗೆ ಚಾಲನೆಯನ್ನೂ ನೀಡಲಾಗಿದೆ. ಇದೀಗ ಶಿಲಾಮಯ ಕಂಬಗಳನ್ನು ಕಟ್ಟೆಯ ನಾಲ್ಕು ಬದಿಗಳಲ್ಲಿ ಇಡಲು ಆಳವಾದ ಗುಂಡಿಗಳನ್ನು ತೆಗೆಯುವ ಸಂದರ್ಭ ದಲ್ಲಿ ದೊಡ್ಡದಾದ ಪಾಣಿಪೀಠ ಹಾಗೂ ಒಂದು ತಾಮ್ರದ ಸಣ್ಣ ಕರಡಿಗೆ ಪತ್ತೆಯಾಗಿದೆ ಎಂದು ಹೇಳಲಾಗಿದೆ
ಹಿಂದೆ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಶಿಲಾಶಾಸನ, ಕೆತ್ತನೆ ಶಿಲ್ಪಗಳು, ರಾಜರ ಕಾಲದ ನಾಣ್ಯಗಳು, ಗರ್ಭಗುಡಿಯಲ್ಲಿ ಪ್ರಭಾವಳಿ ಪತ್ತೆಯಾಗಿದ್ದವು. ಇದೀಗ ಪುಷ್ಕರಣಿ ಅಭಿವೃದ್ಧಿ ಸಂದರ್ಭದಲ್ಲೂ ಹೊಸ ವಿಸ್ಮಯಗಳು ಬೆಳಕಿಗೆ ಬಂದಿವೆ. ಈ ಮೂಲಕ ದೇವಸ್ಥಾನದ ಮಹಿಮೆ ಜನರಿಗೆ ಗೋಚರವಾಗುತ್ತಿದೆ.
ಕೆರೆಯಲ್ಲಿದ್ದ ವರುಣ ದೇವರ ಮೂರ್ತಿ ಸುತ್ತಲು ಕಟ್ಟಿದ ಮುರ ಕಲ್ಲನ್ನು ತೆರವುಗೊಳಿಸಿದ ಸಂದರ್ಭ ದಲ್ಲಿ ಶಿಲಾಮಯವಾದ ಮತ್ತೊಂದು ಪಾಣಿಪೀಠ ಪತ್ತೆಯಾಗಿದೆ.
ಪ್ರತಿ ದಿನವೂ ಕುತೂಹಲಕಾರಿ ಸಂಗತಿ ಬೆಳಕಿಗೆ ಬರುತ್ತಿವೆ. ಇಲ್ಲಿರುವ ವರುಣ ದೇವರು ಕಾಲ ಕಾಲಕ್ಕೆ ಮಳೆ ಬರುವ ಹಾಗೆ ಅನುಗ್ರಹ ನೀಡುತ್ತಿದ್ದಾರೆ . ನೂತನ ಶಿಲಾಮಯ ಕಟ್ಟೆ ಅತೀ ಶೀಘ್ರ ವಾಗಿ ಆಗಬೇಕಾಗಿದ್ದು, ಇಂಜಿನಿಯರ್ ಹಾಗೂ ಶಿಲ್ಪಿಗಳ ನೇತೃತ್ವದಲ್ಲಿ ಕಾಮಗಾರಿ ತುಂಬ ಭರದಿಂದ ಸಾಗುತ್ತಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಹೇಳುತ್ತಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


