ಮುಂಬೈ, ಆಗಸ್ಟ್ 30: ಕಳೆದ 2020 ರಲ್ಲಿ ಕಮಲ್ ರಶೀದ್ ಖಾನ್ ಮಾಡಿರುವ ವಿವಾದಾತ್ಮಕ ಟ್ವೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಾಡ್ ಪೊಲೀಸರು ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ. ಕೆಆರ್‌ಕೆ ಎಂದೇ ಕರೆಯಲ್ಪಡುವ ಅವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಅವರನ್ನು ಬಂಧಿಸಲಾಗಿದ್ದು, ಮಂಗಳವಾರವೇ ಬೊರಿವಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆಷ್ಟೇ ಕ್ರಿಕೆಟಿಗ ಪತಿ ವಿರಾಟ್ ಕೊಹ್ಲಿ ಅವರ “ಖಿನ್ನತೆಯ” ಹಿಂದೆ ನಟಿ ಅನುಷ್ಕಾ ಶರ್ಮಾ ಇದ್ದಾರೆ ಎಂದು ಕೆಆರ್‌ಕೆ ಟ್ವೀಟ್ ಮಾಡಿ ಸುದ್ದಿ ಆಗಿದ್ದರು. ನಟಿಯನ್ನು ತಲೆಯಲ್ಲಿ ತುಂಬಿಕೊಂಡು ಖಿನ್ನತೆಗೆ ಒಳಗಾಗಿದ್ದಾರೆ ಎಂದು ಮೊದಲು ಟ್ವೀಟ್ ಮಾಡಿದ್ದ ಈತನು, ನಂತರದಲ್ಲಿ ಅದನ್ನು ಡಿಲೀಟ್ ಮಾಡಿದ್ದರು.
ದೇಶದ್ರೋಹಿ 2 ಚಿತ್ರ ಬಿಡುಗಡೆ:
ಈ ವರ್ಷದ ಆರಂಭದಲ್ಲಿ KRK ಅವರು ದೇಶದ್ರೋಹಿ 2 ಬಿಡುಗಡೆಯನ್ನು ಘೋಷಿಸಿದಾಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಇದು ಸ್ವಯಂಘೋಷಿತ ಬ್ಲಾಕ್‌ಬಸ್ಟರ್ ಎಂಬುದು ಸ್ಪಷ್ಟವಾಗಿ “ಬಾಹುಬಲಿಗಿಂತ ದೊಡ್ಡದಾಗಿದೆ” ಎಂದು ಹೇಳಲಾಗಿತ್ತು. ಆದರೆ 14 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಮೊದಲ ದೇಶದ್ರೋಹಿ ಚಲನಚಿತ್ರವು ನೆಲ ಕಚ್ಚಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy