ಬೆಂಗಳೂರು ನಗರದಲ್ಲಿ ಬೆಸ್ಕಾಂ ಗ್ರಾಹಕರು ಇನ್ಮುಂದೆ ವಿದ್ಯುತ್ ಬಿಲ್ ಕಟ್ಟಲು ವಿಳಂಬ ಮಾಡುವಂತಿಲ್ಲ. ಹಾಗೆ ಮಾಡಿದರೆ ವಿದ್ಯುತ್ ಸಂಪರ್ಕದ ಲೈಸೆನ್ಸ್ ರದ್ದು ಮಾಡಲು ಬೆಸ್ಕಾಂ ಮುಂದಾಗಿದೆ.
ಮೂರು ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲವೆಂದರೆ ಸಿಬ್ಬಂದಿ ಕರೆಂಟ್ ಫ್ಯೂಸ್ ತೆಗೆಯುವ ಬದಲು ಮನೆಯ ವಿದ್ಯುತ್ ಸಂಪರ್ಕದ ಲೈಸೆನ್ಸ್ ನನ್ನೇ ರದ್ದು ಮಾಡ್ತಾರೆ. ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಂಡರೆ ಪುನಃ ಅರ್ಜಿ ಸಲ್ಲಿಸಿ ಹೊಸ ಕನೆಕ್ಷನ್ ತೆಗೆದುಕೊಳ್ಳಲೇಬೇಕು. ವಿದ್ಯುತ್ ಬಿಲ್ ಪಾವತಿಸುವಲ್ಲಿ ವಿಳಂಬ ಮಾಡಿದ್ರೆ ಕರೆಂಟ್ ಇಲ್ಲದೆ ಕತ್ತಲಲ್ಲೇ ಜೀವನ ನಡೆಸುವಂತಹ ಸ್ಥಿತಿ ಉಂಟಾಗಲಿದೆ.
ತಿಂಗಳಿಗೆ ಸರಿಯಾಗಿ ಬಿಲ್ ಪಾವತಿಸದೆ ನಿರ್ಲಕ್ಷ್ಯ ತೋರುವರರ ವಿರುದ್ಧ ಬೆಸ್ಕಾಂ ಈ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಈ ಬಗ್ಗೆ ಬೆಸ್ಕಾಂ ಎಂ.ಡಿ ಮಹಾಂತೇಶ ಬೀಳಗಿ ಟ್ವೀಟ್ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ. ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಳಿಸುವಂತಹ ತೊಂದರೆ ಬೇಡ ಅಂದರೆ ಸರಿಯಾದ ಟೈಮ್ ಗೆ ವಿದ್ಯುತ್ ಬಿಲ್ ಕಟ್ಟಿ ಎಂದು ಗ್ರಾಹಕರಿಗೆ ಮನವಿ ಮಾಡಿದ್ದಾರೆ.
ಬೆಸ್ಕಾಂ ಎಂಡಿಯ ಟ್ವೀಟ್ ಪೋಸ್ಟ್ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವು ಅಪಾರ್ಟ್‌ಮೆಂಟ್ ನಿವಾಸಿಗಳು ತಿಂಗಳುಗಳು ಕಳೆದ್ರೂ ಬಿಲ್ ಪಾವತಿ ಮಾಡ್ತಿರಲಿಲ್ಲ. ಹೀಗಾಗಿ ಇನ್ಮುಂದೆ ಈ ನಿಯಮವನ್ನ ಗ್ರಾಹಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ಬೆಸ್ಕಾಂನ ಜನರಲ್ ಮ್ಯಾನೇಜರ್ ನಾಗರಾಜು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


