ತುಮಕೂರು: ವಿದ್ಯಾರ್ಥಿನಿಯ ತಾಯಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಆರೋಪದಲ್ಲಿ ಶಿಕ್ಷನೋರ್ವನನ್ನು ಅಮಾನತು ಮಾಡಿದ ಘಟನೆ ಮಧುಗಿರಿ ತಾಲ್ಲೂಕಿನ ದೊಡ್ಡಹಟ್ಟಿಯಲ್ಲಿ ನಡೆದಿದೆ.
ಸುರೇಶ್ ಎಂಬಾತ ಅಮಾನತ್ತಾದ ಶಿಕ್ಷಕನಾಗಿದ್ದು, ದೊಡ್ಡಹಟ್ಟಿ ಸರ್ಕಾರಿ ಶಾಲೆ ಶಿಕ್ಷಕನಾಗಿದ್ದಾನೆ. ಈತ ವಿದ್ಯಾರ್ಥಿಗಳ ಪೋಷಕರ ನಂಬರ್ ಪಡೆದು, ಅಶ್ಲೀಲ ಸಂದೇಶಗಳನ್ನು ಈ ಶಿಕ್ಷಕ ರವಾನಿಸುತ್ತಿದ್ದ ಎನ್ನಲಾಗಿದೆ.
ಶಾಲೆಯ ಬಳಿಕ ತಾಯಂದಿರ ವಾಟ್ಸಾಪ್ ಗೆ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಈ ಶಿಕ್ಷಕನ ವಿರುದ್ಧ ಗ್ರಾಮದ ಮಹಿಳೆಯರು ಡಿಡಿಪಿಐಗೆ ದೂರು ನೀಡಿದ್ದರು.
ಶಿಕ್ಷಕ ಸುರೇಶ್ ಗ್ರಾಮದ ಯುವಕರೊಂದಿಗೆ ಸೇರಿಕೊಂಡು ಪ್ರತಿನಿತ್ಯ ಪಾರ್ಟಿ ಮಾಡಿ ಮಾಡುತ್ತಿರುವ ಆರೋಪ ಕೂಡ ಜೇಲಿ ಬಂದಿದ್ದು, ಈ ಬಗ್ಗೆ ತನಿಖೆಯ ಬಳಿಕ ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪ ಶಿಕ್ಷಕನನ್ನು ಅಮಾನತುಗೊಳಿಸಿ ಕ್ರಮಕೈಗೊಂಡಿದ್ದಾರೆ.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz