ತುರುವೇಕೆರೆ: ಪಟ್ಟಣದಲ್ಲಿ ಇರುವ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ತುರುವೇಕೆರೆ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು, ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಷಡಕ್ಷರಿ ಇವರುಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಕಾಂಗ್ರೆಸ್ ಸಮಾವೇಶವನ್ನು ಏರ್ಪಡಿಸಲಾಯಿತು.
ಇದೇ ವೇಳೆ ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ, ನಮ್ಮ ಸಮಾಜದವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದೆ ಎಂದರು.
ಬಿಜೆಪಿ ಪಕ್ಷ ನಮ್ಮನ್ನು ಕಡೆಗಣಿಸಿದೆ. ನಮ್ಮ ಸಮಾಜ ಕೇವಲ ಭಾರತೀಯ ಜನತಾ ಪಾರ್ಟಿಗೆ ಸೀಮಿತವಲ್ಲ, ಕಾಂಗ್ರೆಸ್ ನಲ್ಲೂ ನಮ್ಮ ಸಮಾಜದವರು ಮಂತ್ರಿ ಆದಂತಹ ಉದಾಹರಣೆಗಳಿವೆ, ನಾವೆಲ್ಲ ಜಾತ್ಯತೀತವಾಗಿ ನಡೆದುಕೊಳ್ಳುತ್ತೇವೆ ಎಂದರು.
ಬೆಮೆಲ್ ಕಾಂತರಾಜು ಮಾತನಾಡಿ, ನಾನು ಜೆಡಿಎಸ್ ಪಕ್ಷದ ಬಗ್ಗೆ ಏನೂ ಮಾತನಾಡುವುದಿಲ್ಲ. ಯಾಕೆಂದರೆ, ಅದು ಗೆಲ್ಲಲು ಸಾಧ್ಯವಿಲ್ಲ, ಈ ಹಿಂದೆ 15 ವರ್ಷ ಶಾಸಕರಾಗಿದ್ದ ಎಂ.ಟಿ. ಕೃಷ್ಣಪ್ಪನವರು ಯಾವುದೇ ಅಭಿವೃದ್ಧಿ ಕೆಲಸ ಮಾಡಲು ವಿಫಲರಾಗಿದ್ದಾರೆ ಎಂದರು.
ಈ ತಾಲೂಕಿಗೆ ಹೇಮಾವತಿ ನೀರು ಬರಲು ನಮ್ಮ ಕಾಂಗ್ರೆಸ್ ಪಕ್ಷ ಕಾರಣ. ಕಾಂಗ್ರೆಸ್ ಸರ್ಕಾರದ ವೇಳೆ ಮನೆ ಮನೆಗೆ ಹಕ್ಕು ಪತ್ರ ಬರಲು ಕಾಂಗ್ರೆಸ್ ಪಕ್ಷ ಕಾರಣವಾಗಿದೆ, ಇನ್ನೂ ಬಿಜೆಪಿಯ ಮಸಾಲಾ ಜಯರಾಮ್ 40 ಪರ್ಸೆಂಟ್ ಕಮಿಷನ್ ಗಿರಾಕಿ, ವೈಜ್ಞಾನಿಕವಾಗಿ ಈ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸವನ್ನು ಮಸಾಲ ಜೈರಾಮ್ ಏನು ಮಾಡಿಲ್ಲ, ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳಿಗೆ ಲಾಭ ತರುವ ಪಕ್ಷ, ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ನಾನು ಪ್ರಾಮಾಣಿಕನಾಗಿ ನಿಮ್ಮ ಸಮಾಜದ ಸೇವೆ ಮಾಡುತ್ತೇನೆ. ಹಾಗಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ ಎಂದು ಮನವಿ ಮಾಡಿದರು.
ತಿಪಟೂರು ಕಾಂಗ್ರೆಸ್ ಅಭ್ಯರ್ಥಿ ಷಡಕ್ಷರಿ ಅವರು ಮಾತನಾಡಿ, ಬಿಜೆಪಿ ಸರ್ಕಾರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ. ನಾನು ಐದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅದರಲ್ಲಿ ನನ್ನನ್ನು ಮೂರು ಬಾರಿ ಸೋಲಿಸಿದ್ದಾರೆ, ಎರಡು ಬಾರಿ ಗೆಲ್ಲಿಸಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂದರು.
ಈ ಸಮಾವೇಶದಲ್ಲಿ ತ್ರೈಲೋಕ್ಯನಾಥ್, ಮಾಸ್ತಿಗೊಂಡನಹಳ್ಳಿ ದೇವರಾಜ್, ರಾಯಸಂದ್ರಕುಮಾರ್, ಲಕ್ಷ್ಮೀಕಾಂತ ಗೋಣೀತುಮಕೂರು, ಸೇರಿದಂತೆ ಸಾವಿರಾರು ವೀರಶೈವ ಲಿಂಗಾಯತ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA