ನೇಪಾಳದ ಪರ್ವತ ಪ್ರದೇಶವಾದ ಮುಸ್ತಾಂಗ್ ಜಿಲ್ಲಾಯಲ್ಲಿ ಭಾನುವಾರ ಪತನಗೊಂಡ ತಾರಾ ಏರ್‍ಲೈನ್‍ವಿಮಾನದ ಅವಶೇಷಗಳ ಬಳಿ ಎಲ್ಲಾ 22 ಮೃತ ದೇಹವನ್ನು ಪತ್ತೆಮಾಡಿ ವಶಪಡಿಸಿಕೊಂಡಿರುವುದಾಗಿ ನೇಪಾಳ ಸೇನೆ ತಿಳಿಸಿದೆ.
ಪ್ರವಾಸಿ ನಗರವಾದ ಪೋಖರಾದಿಂದ ಮುಸ್ತಾಂಗ್ ಜಿಲ್ಲಾಯಲ್ಲಿ ಪತನಗೊಂಡ ವಿಮಾನದ ಅವಶೇಷಗಳ ಸ್ಥಳದಲ್ಲಿ ಇಂದು ತಮ್ಮ ಶೋಧ ಕಾರ್ಯಾಚರಣೆಯನ್ನು ಪೊನರಾರಂಭಿಸಿ ಕೊನೆಯ ಮೃತ ದೇಹವನ್ನು ವಶಪಡಿಸಿಕೊಳ್ಳಲಾಗಿದೆ.
12 ಮೃತ ದೇಹಗಳನ್ನು ಅಪಘಾತದ ಸ್ಥಳದಿಂದ ಕಠ್ಮಂಡುವಿಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನೇಪಾಳ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ನಾರಾಯಣ ಸಿಲ್ವಾಲ್ ಟ್ವೀಟ್ ಮಾಡಿದ್ದಾರೆ. ತಡ ರಾತ್ರಿಯ ವೇಳೆಗೆ, ರಕ್ಷಣಾ ಪಡೆಗಳು ಅಪಘಾತದ ಸ್ಥಳದಿಂದ 21 ಶವಗಳನ್ನು ಹೊರತೆಗೆದಿದ್ದಾರೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನï) ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಅಧಿಕಾರಿಗಳ ಪ್ರಕಾರ, ಕೊನೆಯ ದೇಹವನ್ನು ಪಡೆಯಲು ಅವರು ತಮ್ಮ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿದರು. ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಮತ್ತು ಪ್ರಧಾನ ಮಂತ್ರಿ ಶೇರ್ ಬಹದ್ದೂರ್ ದೇವುಬಾ ವಿಮಾನ ಅಪಘಾತದಲ್ಲಿ ಸಿಬ್ಬಂದಿ ಸದಸ್ಯರು ಮತ್ತು ಪ್ರಯಾಣಿಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ವಿಮಾನ ಪತನದ ಕಾರಣವನ್ನು ಕಂಡುಹಿಡಿಯಲು ಸರ್ಕಾರವು ಹಿರಿಯ ಏರೋನಾಟಿಕಲ್ ಇಂಜಿನಿಯರ್ ರತೀಶ್ ಚಂದ್ರ ಲಾಲ್ ಸುಮನ್ ನೇತೃತ್ವದಲ್ಲಿ ಐದು ಸದಸ್ಯರ ತನಿಖಾ ಆಯೋಗವನ್ನು ರಚಿಸಿದೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನವು ಎಡಕ್ಕೆ ತಿರುಗುವ ಬದಲು ಬಲಕ್ಕೆ ತಿರುಗಿದ ನಂತರ ಪರ್ವತಗಳಿಗೆ ಅಪ್ಪಳಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸಿಎಎಎನ್ ಮಹಾನಿರ್ದೇಶಕ ಪ್ರದೀಪ್ ಅಧಿಕಾರಿ ಸೋಮವಾರ ಸಂಸತ್ತಿನ ಅಂತರರಾಷ್ಟ್ರೀಯ ಸಮಿತಿಯ ಸಭೆಯಲ್ಲಿ ತಿಳಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB