ಸಿರಾ: ಯುದ್ಧ ಪೀಡಿತ ಉಕ್ರೇನ್ ನಲ್ಲಿ ಕರ್ನಾಟಕದ ಹಲವಾರು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ.
ಶಿರಾ ತಾಲ್ಲೂಕಿನ ವಿದ್ಯಾರ್ಥಿ ಕೂಡ ಉಕ್ರೇನ್ ನಲ್ಲಿ ಸಿಲುಕಿದ್ದು, ವಿದ್ಯಾರ್ಥಿಗಳ ಮನೆಗೆ ತಾಲ್ಲೂಕು ಜೆಡಿಎಸ್ ಅದ್ಯಕ್ಷ ಆರ್.ಉಗ್ರೇಶ್ ಭೇಟಿ ನೀಡಿ, ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಭರವಸೆಯನ್ನು ನೀಡಿದರು.
ತಾಲ್ಲೂಕಿನ ವೈದ್ಯಕೀಯ ವಿದ್ಯಾರ್ಥಿ ಸ್ವಾಮಿ ಜೊತೆ ವಿಡಿಯೋ ಕರೆ ಮೂಲಕ ಮಾತನಾಡಿ ಧೈರ್ಯ ತುಂಬಿದರು. ನಮ್ಮ ಪಕ್ಷದಿಂದ ಬೇಕಾಗಿರುವ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಜೊತೆಗೆ ಕುಟುಂಬಸ್ಥರು ಕೂಡ ಧೈರ್ಯದಿಂದ ಇರುವಂತೆ ಹೇಳಿದರು.
ವರದಿ: ಎ.ಎನ್.ಪೀರ್,
ತುಮಕೂರು