ವಿಜಯಪುರ: ಜಿಲ್ಲೆಯ ನಾಗರಿಕರಿಗೆ ಆತ್ಮ ರಕ್ಷಣೆ ಹಾಗೂ ಆರೋಗ್ಯಕರವಾದ ಸಮಾಜ ನಿರ್ಮಾಣದ ಸಲುವಾಗಿ ದಿನಾಂಕ: 24—02–2025 ರಿಂದ ದಿನಾಂಕ: 02—03–2025 ರವರೆಗೆ ನಾಗರಿಕ ಬಂದೂಕು ತರಬೇತಿ ಶಿಬಿರವನ್ನು ವಿಜಯಪುರ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ನಡೆಸಲು ಉದ್ದೇಶಿಸಲಾಗಿರುತ್ತದೆ.
ತರಬೇತಿಯು 7 (ಏಳು) ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ 9:30 ಗಂಟೆಯವರೆಗೆ ನಡೆಯುತ್ತದೆ. ತರಬೇತಿಯು ಮುಕ್ತಾಯವಾದ ನಂತರ ಅರ್ಹ ಅರ್ಜಿದಾರರಿಗೆ ಪೊಲೀಸ್ ಅಧೀಕ್ಷಕರು, ವಿಜಯಪುರ ಜಿಲ್ಲೆ ರವರು ತರಬೇತಿ ಪತ್ರವನ್ನು ನೀಡುವರು.
ಆಸಕ್ತರು ಪೊಲೀಸ್ ಹೆಡ್ ಕ್ವಾಟ್ರರ್ಸ್ ಆವರಣದಲ್ಲಿರುವ ವಿಜಯಪುರ ಜಿಲ್ಲಾ ಶಸ್ತ್ರಾಗಾರದಲ್ಲಿ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ, ತಮ್ಮ ವಿಳಾಸದ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಪರಿಶೀಲನೆ (ಪೊಲೀಸ್ ವೆರಿಫಿಕೇಶನ್) ಮಾಡಿಸಿ, ವಿಳಾಸದ ಗುರುತಿನ ಚೀಟಿ ಮತ್ತು ಇತ್ತೀಚಿನ 3 ಭಾವಚಿತ್ರಗಳೊಂದಿಗೆ ದಿನಾಂಕ: 20–02–2025 ರ ಒಳಗಾಗಿ ಜಿಲ್ಲಾ ಶಸ್ತ್ರಾಗಾರ ವಿಭಾಗಕ್ಕೆ ಸಲ್ಲಿಸಬೇಕು.
ನಿಬಂಧನೆಗಳು
- ಅಭ್ಯರ್ಥಿಯು ಭಾರತದ ಪ್ರಜೆ ಮತ್ತು ವಿಜಯಪೂರ ಜಿಲ್ಲೆಯ ಸ್ಥಳೀಯರಾಗಿರಬೇಕು.
- ಅಭ್ಯರ್ಥಿಯ ವಯಸ್ಸು 18 ವರ್ಷ ಮೇಲ್ಪಟ್ಟವರು ಹಾಗೂ ಆರೋಗ್ಯವಂತರಾಗಿರಬೇಕು.
- ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಹಿನ್ನಲೆಯುಳ್ಳವರಾಗಿರಬಾರದು.
- ತರಬೇತಿಯನ್ನು NON-PROHIBITED ಆಯುಧದಿಂದ ನೀಡಲಾಗುವುದು.
ಅರ್ಜಿ ಸಲ್ಲಿಸಲು ಕಡೆ ದಿನಾಂಕ: 20-02-2025.
ತರಬೇತಿ ನಡೆಯುವ ಸ್ಥಳ: ಜಿಲ್ಲಾ ಪೊಲೀಸ್ ಕವಾಯತು ಮೈದಾನ, ವಿಜಯಪುರ,
ಹೆಚ್ಚಿನ ವಿವರಗಳಿಗಾಗಿ: ಡಿಎಸ್‌ಪಿ ಡಿಎಆರ್ ಘಟಕ, ವಿಜಯಪುರ 9480804206 ಹಾಗೂ ಆರ್‌ಪಿಐ ಡಿಎಆರ್ ಘಟಕ, ವಿಜಯಪುರ 9480804262 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸುವುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4