ತುಮಕೂರು: ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಸ್ನೇಹಕೂಟ ವತಿಯಿಂದ ಗರ್ಭಿಣಿಯರಿಗೆ ಹಾಗೂ ವಿಕಲಚೇತನರಿಗೆ ಎರಡು ಆಟೋಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಗೋಕುಲ ಬಡಾವಣೆಯ ಗಂಗರಾಜು ಹಾಗೂ ನಗರಸಭೆ ಅಧ್ಯಕ್ಷ ರಾಜುರವರ ಸಂಗಡಿಗರ ಸಹಾಯದಿಂದ ಇವತ್ತು 2 ಆಟೋಗಳಲ್ಲಿ ಚಾಲಕರಾದ ಶಿವಕುಮಾರ್ ಮತ್ತು ನಾರಾಯಣ್ ರವರು ಉಚಿತವಾಗಿ ಗರ್ಭಿಣಿಯರಿಗೆ ಹಾಗೂ ವಿಕಲಚೇತನರಿಗೆ ಉಚಿತ ಸೇವೆಯನ್ನು ಕೊಡಲು ಮುಂದೆ ಬಂದಿದ್ದಾರೆ. ಈ ಸೇವೆಯನ್ನು ಇವತ್ತಿನಿಂದ ಪ್ರಾರಂಭ ಮಾಡಿದ್ದಾರೆ ಎಂದು ತಿಳಿಸಿದರು.
ಈ ಇಬ್ಬರು ಆಟೋ ಚಾಲಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈಗಿನ ಕಾಲದಲ್ಲಿ ಈ ರೀತಿಯ ಸೇವೆ ಮಾಡುತ್ತಿರುವುದು ಬಹಳ ಕಡಿಮೆ ಅದರಲ್ಲೂ, ಇಬ್ಬರು ಆಟೋ ಚಾಲಕರು ಸಮಾಜ ಸೇವೆಗೆ ಮುಂದೆ ಬಂದಿದ್ದಾರೆ. ಇಂತಹ ಸೇವೆ ಗರ್ಭಿಣಿಯರಿಗೆ ಮತ್ತು ವಿಕಲಚೇತನರಿಗೆ ಬಹಳ ಅವಶ್ಯಕವಾಗಿದೆ ಎಂದು ಹೇಳಿದರು.
ಉಚಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಅವರು ಖುದ್ದಾಗಿ ಮುಂದೆ ಬಂದು ಈ ಸೇವೆಯನ್ನು ಮಾಡುತ್ತಿದ್ದಾರೆ. ಅವರಿಗೆ ನಮ್ಮ ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸಿ, ಇಂತಹ ಸೇವೆಗಳನ್ನು ಇನ್ನೂ ಬಹಳಷ್ಟು ಜನ ಮಾಡಿ, ಇನ್ನೂ ಹೆಚ್ಚಿನ ಸ್ಫೂರ್ತಿ ಕೊಡಲಿ ಎಂದು ನಾನು ಕೇಳಿಕೊಳ್ಳುತ್ತೇನೆ ಎಂದ ಅವರು, ಈ ಕಾರ್ಯದಲ್ಲಿ ತೊಡಗಿರುವ ನಮ್ಮ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ
ಆಟೋ ಚಾಲಕರ ನಂಬರ್:
ಶಿವಕುಮಾರ್: 9060809171
ನಾರಾಯಣ್: 9916507541
ವರದಿ: ಎ.ಎನ್. ಪೀರ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5