ಪಾವಗಡ: ತಾಲೂಕಿನ ಯನ್ನಾ ಹೊಸಕೋಟೆ ಗ್ರಾಮದ ಸಂತೆಬೀದಿ ರಸ್ತೆಯಲ್ಲಿರುವ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸೋಮವಾರದಂದು ವೈಕುಂಠ ಏಕಾದಶಿಯನ್ನು ವೈಭವದಿಂದ ಆಚರಿಸಲಾಯಿತು.
ಮುಂಜಾನೆಯಿಂದಲೇ ಭಕ್ತಾಧಿಗಳು ದೇವರ ದರ್ಶನ ಪಡೆದರು. ಹಬ್ಬದ ಹಿನ್ನೆಲೆಯಲ್ಲಿ ದೇವರಿಗೆ ತುಳಸಿ ಮತ್ತು ಹೂವಿನ ವಿಶೇಷ ಅಲಂಕಾರ, ಪಂಚಾಮೃತ ಅಭಿಷೇಕ ಮಾಡಲಾಗಿತ್ತು. ಭಜನೆ ಕೀರ್ತನೆ ನೆರವೇರಿದವು. ಭಕ್ತರಿಗೆ ಲಾಡು ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಸಂದರ್ಭದಲ್ಲಿ ಅರ್ಚಕರಾದ ರಾಮದಾಸು, ಧರ್ಮದರ್ಶಿಗಳಾದ ಹೆಚ್.ಆರ್.ಶ್ರೀನಿವಾಸಮೂರ್ತಿ, ಹೆಚ್.ಆರ್.ಗೋಪಾಲ್, ಅನಿಲ್ ಕುಮಾರ್ ಇದ್ದರು.
ವರದಿ: ನಂದೀಶ್ ನಾಯ್ಕ್, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy