ಬಿಬಿಎಂಪಿ ಅಧಿಕಾರಿಗಳು ಮಳೆಪೀಡಿತ ಪ್ರದೇಶಗಳಲ್ಲಿ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದಂತೆ, ಐಟಿ ದಿಗ್ಗಜ ಸಂಸ್ಥೆ ವಿಪ್ರೋ ಸೋಮವಾರದಂದು ಸ್ವತಃ ಜೆಸಿಬಿಗಳು ಹಾಗೂ ಇತರೆ ಯಂತ್ರಗಳನ್ನು ಬಳಸಿಕೊಂಡು ಸಂಸ್ಥೆಯ ಬಳಿಯಿರುವ ರಾಜಾಕಾಲುವೆಯ ಮೇಲೆ ಹೊದಿಸಲಾಗಿದ್ದ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ತೆರವುಗೊಳಿಸಲು ಆರಂಭಿಸಿತು.
ಬಿಬಿಎಂಪಿ ನೀಡಿದ ಮಾಹಿತಿಯ ಪ್ರಕಾರ, ವಿಪ್ರೋ ಸಂಸ್ಥೆ ಕಚೇರಿ ಬಳಿಯಿರುವ ರಾಜಾಕಾಲುವೆ ಮೇಲೆ ೨.೪ ಮೀಟರ್ ಗಳಷ್ಟು ಅಗಲದ ಕಾಂಕ್ರೀಟ್ ಸ್ಲ್ಯಾಬ್ ಒಂದನ್ನು ನಿರ್ಮಾಣ ಮಾಡಿಕೊಂಡಿದೆ. ಇದು ಕಂಪನಿಯ ಆವರಣದೊಳಗೆ ಹರಿಯುವ ರಾಜಾಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳುವಂತೆ ಇಲ್ಲ ಹಾಗೂ ಅಗಲವನ್ನೂ ಸಹ ಕಡಿಮೆಗೊಳಿಸುವಂತೆ ಇಲ್ಲ.
“ಈ ಸ್ಲ್ಯಾಬ್ ನ ಒಂದು ಭಾಗವನ್ನು ತೆರವುಗೊಳಿಸಲಾಯಿತು. ವಿಪ್ರೋ ಸಂಸ್ಥೆ ನಿರ್ಮಾಣ ಮಾಡಿಕೊಂಡಿರುವ ಖಾಯಂ ಕಟ್ಟಡಗಳ ಮೇಲೆ ಹಾಗೂ ರಾಜಕಾಲುವೆ ಪಕ್ಕದಲ್ಲೇ ಇರುವ ಸಲಾರ್‌ಪುರಿಯಾದ ಕಟ್ಟಡಗಳಿಗೆ ಯಾವುದೇ ರೀತಿಯ ಪರಿಣಾಮ ಉಂಟಾಗದಿರಲಿ ಎಂಬ ಉದ್ದೇಶದಿಂದ ಈ ಕೆಲಸವನ್ನು ಮಧ್ಯದಲ್ಲಿಯೇ ನಿಲ್ಲಿಸಲಾಯಿತು. ಉಳಿದ ಸ್ಲ್ಯಾಬ್‌ಗಳನ್ನು ಮಂಗಳವಾರ ಜೆಸಿಬಿ ಬದಲಿಗೆ ಗ್ಯಾಸ್ ಕಟ್ಟರ್ ಗಳನ್ನು ಬಳಸಿ ತೆರವುಗೊಳಿಸಲಾಗುವುದು,” ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸರ್ಜಾಪುರ ರಸ್ತೆಯಲ್ಲಿರುವ ವಿಪ್ರೋದ ಕ್ಯಾಂಪಸ್, ಇತ್ತೀಚೆಗೆ ಸುರಿದಂತಹ ಭಾರಿ ಮಳೆಯಿಂದಾಗಿ, ಹಾಲನಾಯಕನಹಳ್ಳಿ ಕೆರೆ ಹಾಗೂ ಸೌಲ್ ಕೆರೆ ನಡುವೆ ಇರುವಂತಹ ಈ ಬಡಾವಣೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದಂತಹ ಇತರೆ ಹಲವು ಕಚೇರಿಗಳು ಹಾಗೂ ಮನೆಗಳ ಪೈಕಿ ಸೇರಿದೆ.
ಸೋಮವಾರ, ಬಿಬಿಎಂಪಿ ಗ್ರೀನ್ ವುಡ್ ರೆಸಿಡೆನ್ಸಿ ಬಳಿ ಇರುವ ಕಾಲುವೆಯನ್ನು ಮುಚ್ಚಿದಂತ್ತಿದ್ದ ಮೇಲ್ಭಾಗದ ಸಿಮೆಂಟ್ ಸ್ಲ್ಯಾಬ್ ಅನ್ನು ತೆರವುಗೊಳಿಸಿತು. ಸಲಾರ್ ಪುರಿಯಾ ಸಂಸ್ಥೆಯ ಆವರಣದಲ್ಲೂ ಸಹ, ಅಧಿಕಾರಿಗಳು ತಿಳಿಸಿದಂತೆ, ಆವರಣದೊಳಗಿನ ಕಾಲುವೆ ಕಾಮಗಾರಿ ಪೂರ್ಣಗೊಂಡ ನಂತರ ಇದೇ ಕ್ರಮವನ್ನು ಕೈಗೊಳ್ಳಲಾಗಿದೆಯಂತೆ.
ಈ ಸಂಬಂಧ ಮಾತನಾಡಿದ ವಿಪ್ರೋದ ವಕ್ತಾರರು; “ವಿಪ್ರೋ ಸಂಸ್ಥೆ ತನ್ನ ಕಚೇರಿ ಇರುವ ಪ್ರದೇಶ ವ್ಯಾಪ್ತಿಯಲ್ಲಿನ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಬದ್ಧವಾಗಿದೆ. ಸಂಬಂಧಪಟ್ಟ ಪ್ರಾಧಿಕಾರಗಳು ಮಂಜೂರು ಮಾಡಿದಂತಹ ಪ್ಲಾನ್ ಪ್ರಕಾರವೇ ನಿರ್ಮಿಸಲಾಗಿರುವ, ನಮ್ಮ ದೊಡ್ಡಕನ್ನೇಹಳ್ಳೀ ಆವರಣದಿಂದ ಹಾದು ಹೋಗುವ ರಾಜಾಕಾಲುವೆಯ ಸಾಮರ್ಥ್ಯವನ್ನು ವೃದ್ಧಿಸಲು ಬಿಬಿಎಂಪಿ ಜತೆಗೆ ನಾವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ,” ಎಂದು ವಿವರಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy