ನಾನು ನಿಮಗೆ ಮತ ಹಾಕಿದ್ದೇನೆ, ನನ್ನ ಸಮಸ್ಯೆ ಪರಿಹರಿಸಿ, ನನಗೊಂದು ಸಿಂಪಲ್ ಮದುವೆ ಮಾಡಿಸಿಕೊಡಿ ಎಂದು ಮತದಾರನೊಬ್ಬ ಶಾಸಕರೊಬ್ಬರಿಗೆ ಬೇಡಿಕೆಯಿಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಚರಖಾರಿ ಕ್ಷೇತ್ರದ ಶಾಸಕರಾದ ಬ್ರಿಜ್ ಭೂಷಣ್ ರಜಪೂತ್ ಅವರಿಗೆ ಮತದಾರನೊಬ್ಬ ಈ ರೀತಿ ಶಾಕ್ ನೀಡಿದ್ದಾನೆ. ಉತ್ತರ ಪ್ರದೇಶದ ಮಹೋಬಾದ ಪೆಟ್ರೋಲ್ ಬಂಕ್ ಗೆ ಶಾಸಕರ ಕಾರು ಫುಯೆಲ್ ತುಂಬಿಸಿಕೊಳ್ಳಲು ಬಂದಿತ್ತು. ಈ ವೇಳೆ ಬಂಕ್ ನಲ್ಲಿದ್ದ ಉದ್ಯೋಗಿ 44 ವರ್ಷದ ಅಖಿಲೇಂದ್ರ ಖರೆ ಎಂಬಾತ ಸೀದಾ ಶಾಸಕರ ಬಳಿ ಬಂದು, ದಯವಿಟ್ಟು ನನಗೊಂದು ಮದುವೆ ಮಾಡಿಸಿಬಿಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಶಾಸಕ ಬ್ರಿಜ್‌ಭೂಷಣ್, ನಿನಗೆ ಎಂತಹ ವಧು ಬೇಕು? ಎಂದು ಕೇಳಿದ್ದಾರೆ. ಇದಕ್ಕೆ ನನಗೆ ಇದೇ ಸಮುದಾಯದ ವಧು ಬೇಕು ಎನ್ನುವುದೇನಿಲ್ಲ, ಯಾವ ಸಮುದಾಯದ ಹುಡುಗಿಯಾದ್ರೂ ಓಕೆ ಎಂದು ಅಖಿಲೇಂದ್ರ ಉತ್ತರಿಸಿದ್ದಾರೆ.
ಬಳಿಕ ಆತನ ಹಿನ್ನೆಲೆ ಕೇಳಿದಾಗ, ತನಗೆ ತಿಂಗಳಿಗೆ 6,000 ರೂಪಾಯಿ ಸಂಬಳ ಬರುತ್ತದೆ. ಸ್ವಲ್ಪ ಭೂಮಿಯೂ ಇದೆ ಎಂದು ಶಾಸಕರಿಗೆ ತಿಳಿಸಿದ್ದಾನೆ. ಕೊನೆಗೆ ಶಾಸಕರು ಕೂಡ ಅಖಿಲೇಂದ್ರ ಅವರಿಗೆ ವಧುವನ್ನು ಹುಡುಕಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ವಿಡಿಯೋವನ್ನು ಖುದ್ದು ಶಾಸಕ ಬ್ರಿಜ್ ಭೂಷಣ್ ರಜಪೂತ್ ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q