ಪಾವಗಡ: ಆಗ್ನೆಯ ಪದವೀಧರರ ಕ್ಷೇತ್ರ ವ್ಯಾಪ್ತಿಯ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಮತ್ತು ದಾವಣಗೆರೆ (ಹರಿಹರ, ಜಗಳೂರು ದಾವಣಗೆರೆ ತಾಲೂಕುಗಳು) ಸೇರಿ ಜಿಲ್ಲೆಗಳು ಒಳಪಟ್ಟಿದ್ದು ಮತದಾರರರ ಪಟ್ಟಿಯಲ್ಲಿ ಹೆಸರು ಸೇರಿಸುವ ಸಲುವಾಗಿ ಈಗಾಗಲೇ ಮತದಾರರ ನೋಂದಣಿ ಮುಗಿದಿದೆ, ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಭಾರತೀಯ ಜನತಾ ಪಕ್ಷ ಕಾನೂನು ಪ್ರಕೋಷ್ಟದ ಸಂಚಾಲಕರಾದ ವಸಂತ್ ಕುಮಾರ್ ರವರು ಮತ್ತೊಂದು ಸುತ್ತಿನ ಪಧವೀಧರರ ನೋಂದಣಿ ಪ್ರಕ್ರಿಯೆಯು ನವೆಂಬರ್ 25 ರಿಂದ ಡಿಸೆಂಬರ್ 10ರವರೆಗೆ ನಡೆಯಲಿದ್ದು ಈಗಾಗಲೇ ನೋಂದಣಿಯಾಗಿರುವವರು ತಮ್ಮ ಹಕ್ಕು ಆಕ್ಷೇಪಣೆಗಳು ಏನಾದರೂ ಇದ್ದರೆ ನವೆಂಬರ್ 25 ರ ನಂತರ ತಮ್ಮ ತಮ್ಮ ತಾಲ್ಲೂಕು ಕಛೇರಿಯಲ್ಲಿ ಸಲ್ಲಿಸಬಹುದು.
ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಯಾಗಿರುವುದರಿಂದ ಪದವೀಧರರಿಗೆ ವೈಯುಕ್ತಿಕವಾಗಿ ಅಭಿನಂದಿಸುತ್ತೇನೆ. ಮೊದಲನೇ ಹಂತದಲ್ಲಿ ಕಳೆದ ಬಾರಿಯ ಚುನಾವಣೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧ ಮತದಾನದ ಹಕ್ಕನ್ನು ತಾವೆಲ್ಲರೂ ಚಲಾಯಿಸುವ ಮೂಲಕ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.
ಮುಂದಿನ ದಿನಗಳಲ್ಲಿ ನೋಂದಣಿಯಾಗದಿರುವರರು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ನೋಂದಣಿಯಾಗ ಬೇಕೆಂದು ಪತ್ರಿಕಾ ವರದಿ ಮೂಲಕ ತಮ್ಮಲಿ ಏನಂತಿಸಿಕೊಳ್ಳುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗೇಯ ಪದವೀದರರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತುಮಕೂರು ಜಿಲ್ಲೆಯಲ್ಲಿ 41,000, ಚಿತ್ರದುರ್ಗ 37,000, ಚಿಕ್ಕಬಳ್ಳಾಪುರ — 23,500, ದಾವಣಗೆರೆ 24,500,ಕೋಲಾರ 27,500 ಒಟ್ಟು ಪದವೀಧರರು ನೋಂದಣಿಯಾಗಿದ್ದಾರೆ. ಆಗ್ನೆಯ ಪದವೀದರರ ಕ್ಷೇತ್ರದ ಮತದಾರರರಾಗಿ ಒಟ್ಟು 1,53,500 ಪದವೀಧರರು ನೋಂದಣಿ ಮಾಡಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


