ರಾಜಸ್ಥಾನದ ಜನತೆ ನಾಳೆ ಮತಗಟ್ಟೆ ತಲುಪಲಿದ್ದಾರೆ. ಮೌನ ಪ್ರಚಾರದ ದಿನವಾದ ಇಂದು ಅಭ್ಯರ್ಥಿಗಳು ಮತದಾರರನ್ನು ಖುದ್ದಾಗಿ ಭೇಟಿ ಮಾಡಿ, ದೂರವಾಣಿ ಕರೆ ಮಾಡಿ ಮತ ಭದ್ರಪಡಿಸಿಕೊಳ್ಳಲು ನಿರತರಾಗಿದ್ದಾರೆ.
200 ಸ್ಥಾನಗಳ ರಾಜಸ್ಥಾನ ವಿಧಾನಸಭೆಗೆ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ. ರಾಜ್ಯದಲ್ಲಿ 5 ಕೋಟಿ 25 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ರಾಜ್ಯದಲ್ಲಿ 51756 ಮತಗಟ್ಟೆಗಳಿಗೆ ವ್ಯವಸ್ಥೆ ಮಾಡಲಾಗಿದೆ.ಕಾಂಗ್ರೆಸ್ ಅಭ್ಯರ್ಥಿ ಗುರ್ಮಿತ್ ಸಿಂಗ್ ಕೋಣೂರ್ ನಿಧನದಿಂದ ಒಂದು ಕ್ಷೇತ್ರದಲ್ಲಿ ಮತದಾನವನ್ನು ಮುಂದೂಡಲಾಗಿದೆ.
ಸಮೀಕ್ಷೆಯ ಫಲಿತಾಂಶಗಳು ಮೊದಲ ಹಂತದಲ್ಲಿ ಬಿಜೆಪಿ ಪರ ಅಲೆಯ ಮುನ್ಸೂಚನೆ ನೀಡಿದ್ದರೂ, ಅಂತಿಮ ಹಂತದಲ್ಲಿ ಎರಡೂ ಪಕ್ಷಗಳು ಪ್ರಬಲ ಪೈಪೋಟಿ ಮುಂದುವರಿಸಿವೆ.


