ಹಾಸನ: ಜಿಲ್ಲೆ ಹೊಳೆನರಸೀಪುರದ ತಾಲ್ಲೂಕು ಪಂಚಾಯಿತಿಯಲ್ಲಿ ಇಂದು ವಿಕಲಚೇತನರಿಗೆ 5% ಅನಿರ್ಭಂಧಿತ ಅನುದಾನದ ಅಡಿಯಲ್ಲಿ 23 ತ್ರಿ ಚಕ್ರ ಬೈಕ್ ವಿತರಣೆ ಮಾಡಲಾಯಿತು.
ಹೊಳೆನರಸೀಪುರ ಶಾಸಕರಾದ ಎಚ್.ಡಿ.ರೇವಣ್ಣನವರ ಅದ್ಯಕ್ಷತೆಯಲ್ಲಿ ಹಾಸನ ಜಿಲ್ಲಾ ಪಂಚಾಯಿತಿಯ ಸದಸ್ಯರಾದ ಭವಾನಿ ರೇವಣ್ಣನವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಹೊಳೆನರಸೀಪುರ ಕೃಷಿ ಇಲಾಖೆಯ ಆವರಣದಲ್ಲಿ ಎಚ್.ಡಿ.ರೇವಣ್ಣ ನವರು ವಿಶೇಷ ಚೇತನರಿಗೆ ಬೈಕ್ ವಿತರಣೆ ಮಾಡಿದರು. ವಿಶೇಷ ಚೇತನರ ಕಲ್ಯಾಣ ಅಧಿಕಾರಿಗಳಾದ ಅನುಪಮಾ ಅವರು ಅಂಗವಿಕಲರಿಗೆ ರಸ್ತೆಯ ನಿಯಮಾವಳಿ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ E O ಆದ ಗೋಪಾಲ್ ರವರು ಹಾಗೂ ವಿವಿಧೋದ್ದೇಶ ಪುನರ್ ವಸತಿ ಕಾರ್ಯಕರ್ತರು ಕೆ.ಬಿ.ಹರೀಶ್.ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಮಂಜು ಶ್ರವಣೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50s


