ಸರಗೂರು: ಪಟ್ಟಣದ ವಿರಕ್ತಮಠದಲ್ಲಿ ತಾಲ್ಲೂಕು ವಿಶ್ವಕರ್ಮ ಸೇನಾ ಸಮಿತಿ ವತಿಯಿಂದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಮಠದ ಶ್ರೀ ಮಹದೇವಸ್ವಾಮಿ ಸ್ವಾಮೀಜಿ ಸೇನಾ ಸಮಿತಿ ಅಧ್ಯಕ್ಷ ಲೋಕೇಶ್, ಗ್ರಾಪಂ ಅಧ್ಯಕ್ಷ ಮುಳ್ಳೂರು ಗೊವಿಂದಚಾರಿ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಸರಗೂರು ತಾಲ್ಲೂಕಿನ ಪಟ್ಟಣದ 11 ವಾರ್ಡಿನ ಪಡಗಲು ವಿರಕ್ತಮಠದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದಚಾರ್, ಸನಾತನ ಇತಿಹಾಸ ಹೊಂದಿದ ವಿಶ್ವಕರ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಸಮಾಜ ವಿದ್ಯಾವಂತರಾಗಿ, ಸಂಘಟಿತರಾಗಿಗಬೇಕು ಎಂದು ಕರೆ ನೀಡಿದರು.
ವಿಶ್ವಕರ್ಮ ಸೇನಾ ಸಮಿತಿ ಅಧ್ಯಕ್ಷ ಲೋಕೇಶ್ ಮಾತನಾಡಿ, ನಮ್ಮ ಸಮಾಜಕ್ಕೆ ಸರಿಯಾದ ಸಾಮಾಜಿಕ ನ್ಯಾಯ ಸಿಗಬೇಕಿದೆ. ಸಮಾಜಕ್ಕೆ ಮೀಸಲಾತಿಯ ಅಗತ್ಯವಿದ್ದು, ಸಮಾಜದಲ್ಲಿ ತುಳಿತಕ್ಕೊಳಗಾದ ಅರ್ಹರಿಗೆ ಮೀಸಲಾತಿ ದೊರಕಬೇಕು ಎಂದರು.
ವಿರಕ್ತ ಮಠದ ಶ್ರೀ ಮಹದೇವಸ್ವಾಮಿ ಸ್ವಾಮೀಜಿ ಮಾತನಾಡಿ, ಯಾವುದೇ ಧರ್ಮ ಜಾತಿ ಮೀಸಲಾತಿಗೆ ಒಳಪಡಿಸ ಬೇಕಾದರೆ ಕುಲಶಾಸ್ತ್ರ ಅಧ್ಯಯನವಾಗಬೇಕು.
ಬೇರೆ ಸಮಾಜಕ್ಕೆ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಬೇಕು. ವಿಶ್ವಕರ್ಮ ಸಮಾಜದಲ್ಲಿ ಅನೇಕ ಸಂಘಟನೆಗಳಿದ್ದು ಇಂತಹವರಿಗೆ ಸಮಾಜದ ಪರಿಕಲ್ಪನೆ ಶ್ರಮವಹಿಸಿ ಮಾಡಲಾಗುತ್ತದೆ. ಪರಮಪೂಜ್ಯ ಜಕಣಾಚಾರಿ ಅಮರಶಿಲ್ಪಿಯಾಗಿದ್ದು ದೇವಿ ಆರಾಧನೆ ಮಾಡುವವರಿಗೆ ಇಷ್ಠಾರ್ಥ ಸಿದ್ದಿಯಾಗುವದೆಂದು ಹೇಳಿದರು.
ಗೌರವಾಧ್ಯಕ್ಷ ಲಿಂಗರಾಜು ಚಾರ್, ಉಪಾಧ್ಯಕ್ಷ ವಸಂತಕುಮಾರ್, ಸಮಾಜದ ಸಂಘಟನೆ ಬಗ್ಗೆ ಮಾತನಾಡಿದರು. ಕಾರ್ಯದರ್ಶಿ ಬಾಡಗರವಿ, ಖಜಾಂಚಿ ಸಂತೋಷ ಎಸ್.ಎಂ., ಕಾನೂನು ಸಲಹೆಗಾರ ಮಹದೇವಸ್ವಾಮಿ, ಕಾರ್ಯಾಧ್ಯಕ್ಷ ಮಂಜುನಾಥ, ತಾಲ್ಲೂಕು ಜೆಡಿಎಸ್ ಹಿಂದುಳಿದ ವರ್ಗದ ಅಧ್ಯಕ್ಷ ದಡದಹಳ್ಳಿ ಮೂರ್ತಿ, ವಿಶ್ವಕರ್ಮ ಸಮಾಜ ಮುಖಂಡರು ಜಿ ರವಿ, , ಎಚ್ ಎಂ ದಾಸಚಾರಿಸರಗೂರು, ಜಕಣಾಚಾರಿ ಸ್ಪಂದನ ಸಮಿತಿ ಅಧ್ಯಕ್ಷ ಶ್ರೀನಿವಾಸ, ಮಂಜುನಾಥ, ,ಸೋಮಚಾರಿಬಿರ್ವಾಳ್, ಗೋವಿಂದಚಾರಿ,ಆನಂದ್ ಕಲ್ಲಂಬಾಳು, ಪ್ರಭುಸ್ವಾಮಿ, ಬಸವರಾಜು, ಸ್ವಾಮಿ,ರಾಜಚಾರಿಮುಳ್ಳೂರು, ಸಿದ್ದಪ್ಪಾಜಿ, ನವೀನ್, ಮೋಹನ್ಎಂಸಿ, ಪ್ರಕಾಶ್, ವೆಂಕಟೇಶ್ ಕೋಟೆ, ಎಲ್ಐಸಿ ರಾಜು,ಚನ್ನಚಾರ್, ಹೊಸಳ್ಳಿ ಸಿದ್ದಪ್ಪಾಜಿ, ವೆಂಕಟೇಶ್, ಚಲುವಚಾರಿ, ಸುರೇಶ್ ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


