ಕೊರಟಗೆರೆ: ವಾಟರ್ ಟ್ಯಾಂಕ್ ಸ್ವಚ್ಚತೆ ಇಲ್ಲದೇ ಅನೈರ್ಮಲ್ಯ ಹೆಚ್ಚಾಗಿ 15 ಜನರು ವಾಂತಿ ಬೇದಿಯಿಂದ ಬಳಲುತ್ತಿದ್ದು, 15 ವರ್ಷದ ಬಾಲಕಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಮಾದವಾರ ಗ್ರಾಮದ ಹರೀಶ್ ಎಂಬವರ ಮಗಳಾದ ವಿದ್ಯಾರ್ಥಿ ಪೂರ್ಣಿಮಾ(15) ಮೃತಪಟ್ಟ ಬಾಲಕಿಯಾಗಿದ್ದಾಳೆ. ಘಟನೆಗೆ ತಾಲ್ಲೂಕು ಪಂಚಾಯಿತಿ ಇ ಓ ಮತ್ತು ಗ್ರಾಮ ಪಂಚಾಯಿತಿ ಪಿಡಿಓ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ತೀತಾ ಗ್ರಾಮ ಪಂಚಾಯಿತಿಯ ಮಾದವಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಪೇಸ್ ಬುಕ್ ಮತ್ತು ಇನ್ಸ್ ಸ್ಟಾಗ್ರಾಮ್ ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಬುದ್ಧಿವಾದ ಹೇಳುತ್ತಾರೆ. ಆದ್ರೆ ತಮ್ಮ ಜವಾಬ್ದಾರಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಟರ್ ಟ್ಯಾಂಕು, ನೀರಿನ ತೊಟ್ಟಿ, ಚರಂಡಿ, ಕುಡಿಯವ ನೀರಿನ ಸ್ವಚ್ಚತೆಯೇ ಗ್ರಾಮದಲ್ಲಿ ಮರೀಚಿಕೆಯಾಗಿದೆ. ಸಾರ್ವಜನಿಕರಿಗೆ ಅಧಿಕಾರಿಗಳು ಜಾಗೃತಿ ಮೂಡಿಸುವ ಮೊದಲು ಅಧಿಕಾರಿಗಳಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಆರೋಗ್ಯ ಇಲಾಖೆ ಟಿ ಹೆಚ್ ಓ ಮತ್ತು ತಾಲ್ಲೂಕು ಪಂಚಾಯಿತಿ ಇಓ ಕೇಂದ್ರ ಸ್ಥಾನದಲ್ಲೇ ಇರದೇ ಸಮಸ್ಯೆ ದ್ವಿಗುಣವಾಗಿದೆ. ಮಾದವಾರ ಗ್ರಾಮದಲ್ಲಿ ಕಳೆದ ವಾರದಿಂದ ಅನಾರೋಗ್ಯ ನಿರ್ಲಕ್ಷ ವಹಿಸಿರುವ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. THO ವಿಜಯ್ ಕುಮಾರ್ ನೆಪಮಾತ್ರಕ್ಕೆ ಗ್ರಾಮಕ್ಕೆ ಭೇಟಿ ನೀಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q