ಮೆಪ್ಪಾಡಿ: ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ತನ್ನ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡಿದ್ದ ಕೇರಳದ ಯುವತಿ ತಾನು ಪ್ರೀತಿಸಿದವನ ಸಾಂತ್ವಾನದಿಂದ ನೋವು ಮರೆಯುತ್ತಿದ್ದಳು. ಆದ್ರೆ, ಇದೀಗ ಆ ಯುವಕನೂ ಅಪಘಾತದಲ್ಲಿ ಮೃತಪಟ್ಟ ದುರಂತ ಘಟನೆ ನಡೆದಿದೆ.
ಶ್ರುತಿ ತನ್ನವರನ್ನು ಕಳೆದುಕೊಂಡು ತಬ್ಬಲಿಯಾದ ಯುವತಿಯಾಗಿದ್ದಾಳೆ. ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಈಕೆ ತನ್ನ ಕುಟುಂಬದ 9 ಮಂದಿಯನ್ನು ಕಳೆದುಕೊಂಡಳು. ಈಕೆಗೆ ಡಿಸೆಂಬರ್ ನಲ್ಲಿ ಜೆನ್ಸನ್ ಎಂಬಾತನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆತ ಒಬ್ಬನಾದರೂ ಇದ್ದಾನೆ ಎನ್ನುವ ಧೈರ್ಯದಲ್ಲಿ ಆಕೆಯಿದ್ದಳು. ಆದ್ರೆ, ಮಂಗಳವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜೆನ್ಸನ್ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಕೊನೆಯುಸಿರೆಳೆದಿದ್ದಾನೆ.
ಜೆನ್ಸನ್ ಹಾಗೂ ಶ್ರುತಿ ವಿವಾಹ ಸರಳವಾಗಿ ಆಚರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದರಂತೆ. ಹೀಗಾಗಿ ಮದುವೆ ತಯಾರಿಗಳು ನಡೆಯುತ್ತಿದ್ದವು. ಈ ನಡುವೆ ಶ್ರುತಿ ಸಂಬಂಧಿಕರು ಹಾಗೂ ಜೆನ್ಸನ್ ಮದುವೆ ತಯಾರಿಗಾಗಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಬಸ್ಸಿಗೆ ಡಿಕ್ಕಿ ಹೊಡೆದಿದ್ದು, ಜೆನ್ಸನ್ ಗಂಭೀರವಾಗಿ ಗಾಯಗೊಂಡಿದ್ದ. ಬುಧವಾರ ರಾತ್ರಿ 8:50ರ ಸುಮಾರಿಗೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇದ್ದ ಏಕೈಕ ಆಸರೆಯನ್ನೂ ಕಳೆದುಕೊಂಡು ಶ್ರುತಿ ಮತ್ತೆ ಒಬ್ಬಂಟಿಯಾಗಿದ್ದಾಳೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296