ಸರಗೂರು: ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟಿದ್ದೇವೆ ಎಂದು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪೂರ್ಣಿಮ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಶನಿವಾರದಂದು ವಿವೇಕಾನಂದ ಸ್ಮಾರಕ ಆಸ್ಪತ್ರೆ, ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಯನ್ನು ಮಾತನಾಡಿದರೆ ಸಾಲದು, ಭಾಷೆ ಉಳಿಸಲಿಕ್ಕೆ ನಾವೆಲ್ಲ ಪ್ರಯತ್ನಿಸಬೇಕು. ನಾನು ವೈದ್ಯರಾಗಿದ್ದರೂ ಕನ್ನಡ ಮಾಧ್ಯಮದಲ್ಲಿ ನಾನು ಓದಿದ್ದು ಈಗಲೂ ಕೂಡ ನಾನು ಕನ್ನಡದಲ್ಲಿಯೇ ಸಹಿ ಮಾಡುತ್ತಿದ್ದೇನೆ, ಹೊರಗಿನಿಂದ ಬಂದವರಿಗೆ ಕನ್ನಡವನ್ನು ಕಲಿಸುವಂತರಾಗಬೇಕು, ಕನ್ನಡ ಸುಂದರವಾದ ಭಾಷೆ ನಾವು ನಮ್ಮ ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟಿದ್ದೇವೆ. ಕನ್ನಡ ಭಾಷೆಗೆ ಅಪಾರವಾದ ಗೌರವವನ್ನು ನಾವೆಲ್ಲ ನೀಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮತ್ತು ನಿಕಟಪೂರ್ವ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ವೈ.ಡಿ.ರಾಜಣ್ಣ ಮಾತನಾಡಿ, ಕರ್ನಾಟಕ ರಾಜ್ಯ ಉದಯವಾಗಬೇಕು ಎಂಬುದು ಕನ್ನಡ ಹೋರಾಟಗಾರರ ಒತ್ತಾಸೆ ನಾವು ನಮ್ಮ ಮಕ್ಕಳಿಗೆ ತಿಳಿಸಬೇಕಾಗಿರುವುದು ಕನ್ನಡ ಓದುವುದು ಕೇವಲ ಉದ್ಯೋಗಕ್ಕೆ ಮತ್ತು ಹಣ ಸಂಪಾದನೆಗೆ ಮಾತ್ರ ಸೀಮಿತವಾಗಬಾರದು, ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚುತ್ತಿದ್ದು ಮನೆಗಳಲ್ಲಿ ಮಕ್ಕಳಿಗೆ ದಿನ ಪತ್ರಿಕೆ ಓದಲಿಕ್ಕೆ ಅಭ್ಯಾಸ ಮಾಡಿಸಿ ಕಲೆ. ಸಂಸ್ಕೃತಿ, ಸಂಪ್ರದಾಯಗಳನ್ನು ಮಕ್ಕಳು ಕಲಿಯುವಂತಾಗಬೇಕು,ಕನ್ನಡವನ್ನು ಉಳಿಸಿ.ಕನ್ನಡವನ್ನು ಪ್ರೀತಿಸಿ, ಕನ್ನಡವನ್ನು ಬೆಳೆಸುವ ಮೂಲಕ ನವೆಂಬರ್ ಒನ್ ಕನ್ನಡಿಗರಾಗದೆ ನಂಬರ್ ಒನ್ ಕನ್ನಡಿಗರಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಫೆಥಾಲಜಿಸ್ಟ್ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಡಾ.ಗಣೇಶ್, ಕನ್ನಡವು ದೈವ ಸ್ವರೂಪವಾದ ಭಾಷೆ ನಮ್ಮ ತಂದೆ ತಾಯಿಗಳು ನಿಕಟವರ್ತಿಗಳಾಗಿ ಸಂಭಾವನೆ, ಸಂವಹನ, ಸಂತೋಷ ಮತ್ತು ಸಂಭಾಷಣೆಯನ್ನು ಹೃದಯಪೂರ್ವಕವಾಗಿ ಹಂಚಿಕೊಳ್ಳುವ ಭಾಷೆಯೇ ಕನ್ನಡ ಭಾಷೆ, ಕನ್ನಡ ನೆಲ ಜಲದ ಉಳಿವಿಗೆ ನಾವೆಲ್ಲರೂ ಹೋರಾಡಬೇಕು, ಪರಭಾಷೆಯನ್ನು ಗೌರವಿಸಬೇಕು. ನಮ್ಮ ಕನ್ನಡ ಮಾತೃಭಾಷೆಯನ್ನು ಉಳಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕರಾದ ಸಂಧ್ಯಾ ಬಿ.ಜಿ., ಡಾ.ಶಂಕರ್ ಎಚ್.ಕೆ., ಡಾ.ನಾಗೇಶ್. ಬೀನಾ, ನಿಂಗರಾಜು. ರಮೇಶ ಎಂ.ಪಿ., ಗೋಪಾಲಕೃಷ್ಣ, ಶ್ರೀಕಾಂತ್, ರೇಚಣ್ಣಪ್ರಸಾದ್, ಸುರೇಂದ್ರ, ಮಂಜುಳ, ಜಯರಾಮ್, ನವೀನ್ ಕುಮಾರ್, ಪ್ರವೀಣ್, ನಂಜುಂಡಸ್ವಾಮಿ, ಸುಧಾರಾಣಿ ಗೋಪಾಲಕೃಷ್ಣ, ಅನಿತಾ, ಸ್ಪೂರ್ತಿ ಕೃಷ್ಣಕುಮಾರ್ ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿವರ್ಗ ಮತ್ತು ಸಾರ್ವಜನಿಕರು ಭಾಗವಹಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


