ನವದೆಹಲಿ: ನಾವು ದಿನದ 24 ಗಂಟೆಗಳ ಕಾಲ ಕೆಲಸ ಮಾಡಬೇಕು. ದೇಶಕ್ಕೆ ನಾಯಕತ್ವ ನೀಡುವ, ಎಲ್ಲಕ್ಕಿಂತ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುವ ರೀತಿಯಲ್ಲಿ ಯುವ ಪೀಳಿಗೆಯನ್ನು ತಯಾರು ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಭಾರತ್@2047: ಯುವ ಧ್ವನಿ ಉಪಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ಪ್ರಸಕ್ತ ಅವಧಿಯಲ್ಲಿ ಭಾರತ ಎತ್ತರಕ್ಕೆ ಏರಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತದ ಯುವಜನತೆಯ ಶಕ್ತಿ ಬದಲಾವಣೆಯ ಪ್ರತಿನಿಧಿ ಹಾಗೂ ಬದಲಾವಣೆಯ ಫಲಾನುಭವಿ ಎರಡೂ ಆಗಿದೆ . ಯಾವುದೇ ರಾಷ್ಟ್ರದ ಜೀವಿತದಲ್ಲಿ, ಇತಿಹಾಸ ಅದರ ಅಭಿವೃದ್ಧಿ ಪಯಣದಲ್ಲಿ ಅತ್ಯುತ್ತಮ ಹೆಜ್ಜೆ ಇಡುವುದಕ್ಕೆ ಸಮಯವನ್ನು ಒದಗಿಸುತ್ತದೆ. ಭಾರತ ಈಗ ಅಮೃತಕಾಲದಲ್ಲಿದೆ ಹಾಗೂ ಈ ಅವಧಿ ಭಾರತಕ್ಕೆ ಅಭೂತಪೂರ್ವವಾದ ಜಿಗಿತಕ್ಕೆ ಸೂಕ್ತವಾಗಿದೆ. ಆದ್ದರಿಂದ ಅಮೃತಕಾಲದ ಪ್ರತಿಯೊಂದು ಕ್ಷಣವನ್ನೂ ಸದುಪಯೋಗಪಡಿಸಿಕೊಳ್ಳಬೇಕೆಂದು ಮೋದಿ ಕರೆ ನೀಡಿದ್ದಾರೆ.


