ಲೋಕಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳಾಗಿ ಹೊರಹೊಮ್ಮಿರುವವರ ಪೈಕಿ 105 ಅಭ್ಯರ್ಥಿಗಳು(ಶೇ 19ರಷ್ಟು) ತಮ್ಮ ಶೈಕ್ಷಣಿಕ ಅರ್ಹತೆ 5ನೇ ತರಗತಿಯಿಂದ 12ನೇ ತರಗತಿ ಎಂದು ಘೋಷಿಸಿದ್ದು, 420 ಅಭ್ಯರ್ಥಿಗಳು(ಶೇ 77 ರಷ್ಟು) ತಮ್ಮ ಶೈಕ್ಷಣಿಕ ಅರ್ಹತೆ ಪದವಿ ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ಎಡಿಆರ್) ತಿಳಿಸಿದೆ.
ವಿಜೇತ ಅಭ್ಯರ್ಥಿಗಳ ಪೈಕಿ ಇಬ್ಬರು ಅಭ್ಯರ್ಥಿಗಳು ತಾವು ಐದನೆಯ ತರಗತಿವರೆಗೆ ಓದಿದ್ದೇವೆ ಎಂದು ಘೋಷಿಸಿಕೊಂಡಿದ್ದರೆ, ನಾಲ್ವರು ವಿಜೇತ ಅಭ್ಯರ್ಥಿಗಳು ಎಂಟನೆಯ ತರಗತಿವರೆಗೆ ವ್ಯಾಸಂಗ ಮಾಡಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ. 34 ವಿಜೇತ ಅಭ್ಯರ್ಥಿಗಳು ತಾವು 10ನೇ ತರಗತಿವರೆಗೆ ವ್ಯಾಸಂಗ ಮಾಡಿರುವುದಾಗಿ ಹೇಳಿಕೊಂಡಿದ್ದರೆ, 65 ವಿಜೇತ ಅಭ್ಯರ್ಥಿಗಳು ತಾವು 12ನೇ ತರಗತಿವರೆಗೆ ವ್ಯಾಸಂಗ ಮಾಡಿರುವುದಾಗಿ ಘೋಷಿಸಿಕೊಂಡಿದ್ದಾರೆ.
ವಿಜೇತ ಅಭ್ಯರ್ಥಿಗಳ ಪೈಕಿ 17 ಮಂದಿ ಅಭ್ಯರ್ಥಿಗಳು ಡಿಪ್ಲೊಮಾ ಪದವೀಧರರಾಗಿದ್ದರೆ, ಓರ್ವ ಅಭ್ಯರ್ಥಿ ಕೇವಲ ಅಕ್ಷರಸ್ಥ ಮಾತ್ರ ಆಗಿರುವ ಸಂಗತಿಯೂ ಬೆಳಕಿಗೆ ಬಂದಿದೆ. ಥಿಂಕ್-ಟ್ಯಾಂಕ್ PRS ಶಾಸಕಾಂಗ ಸಂಶೋಧನೆಯ ಮತ್ತೊಂದು ವಿಶ್ಲೇಷಣೆಯ ಪ್ರಕಾರ, 543 ಸಂಸದರಲ್ಲಿ ಕೃಷಿ ಮತ್ತು ಸಮಾಜ ಕಾರ್ಯ ಸಾಮಾನ್ಯ ವೃತ್ತಿಯಾಗಿ ಹೊರಹೊಮ್ಮಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA