2019ರಲ್ಲಿ ಅಮೆರಿಕದ ಕಾನ್ಸಾಸ್ನ ಹೇಸ್ನಲ್ಲಿ ಒಂದು ಘಟನೆ ನಡೆದಿತ್ತು.. ಕೋಲ್ಬಿ ಟ್ರಿಕಲ್ ಎಂಬ ವ್ಯಕ್ತಿ ತನ್ನ ಪತ್ನಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದ.ಅನಂತರ 911ಗೆ ಕರೆ ಮಾಡಿ, ಪತ್ನಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದ.ವೈದ್ಯರು ಕೂಡಾ ಇದನ್ನು ಆತ್ಮಹತ್ಯೆ ಎಂದೇ ಘೋಷಣೆ ಮಾಡಿದ್ದರು.
ಕೆಲ ತಿಂಗಳ ಬಳಿಕ ಆರೋಪಿ, ತನ್ನ ಪತ್ನಿಯ ಹೆಸರಿನಲ್ಲಿದ್ದ ಇನ್ಶೂರೆನ್ಸ್ ಕ್ಲೇಮ್ ಮಾಡಿಕೊಂಡು, 120,000 ಡಾಲರ್ ಹಣವನ್ನು ಪಡೆದಿದ್ದ.. ಈ ಹಣದಲ್ಲಿ 2,000 ಡಾಲರ್ ಅಂದರೆ ಸುಮಾರು 1.6 ಲಕ್ಷ ರೂಪಾಯಿ ಕೊಟ್ಟು ಸೆಕ್ಸ್ ಡಾಲ್ ಖರೀದಿ ಮಾಡಿದ್ದ.. ಇದಾದ ಮೇಲೆ ಪೊಲೀಸರಿಗೆ ಹಲವು ಅನುಮಾನಗಳು ಹುಟ್ಟು ಹಾಕಿದ್ದವು.. ಕೊನೆಗೆ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದ.. ಇದೀಗ ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA