ಢಾಕಾ: ಮೀಸಲಾತಿ ವಿಷಯಕ್ಕೆ ಸಂಬಂಧಿಸಿದ ಪ್ರತಿಭಟನೆ ಹಿಂಸಾರೂಪ ಪಡೆದುಕೊಳ್ಳುತ್ತಿದ್ದಂತೆಯೇ ಬಾಂಗ್ಲಾದೇಶದಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದ ಗದ್ದುಗೆ ಹಿಡಿದಿದ್ದ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದೇಶದಿಂದ ಭಾರತಕ್ಕೆ ಪಲಾಯನ ಮಾಡಿದ್ದಾರೆ.
ಹಸೀನಾ ಅವರ ರಕ್ಷಣೆಗೆ ಭಾರತ ಕ್ರಮಕೈಗೊಂಡಿದ್ದು, ಅವರನ್ನು ಬಿಗಿ ಭದ್ರತೆಯೊಂದಿಗೆ ಸುರಕ್ಷಿತವಾಗಿ ಭಾರತದಲ್ಲಿ ಇಳಿಸಿದೆ. ಹಸೀನಾ ಅವರು ಬಾಂಗ್ಲಾದಿಂದ ಹೊರಡುತ್ತಿದ್ದಂತೆ ಭಾರತೀಯ ವಾಯುಪಡೆಯ ರಾಡಾರ್ ಗಳು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದವು. ಸಂಜೆ 6ರ ಸುಮಾರಿಗೆ ಹಸೀನಾ ಮತ್ತು ಅವರ ಸಹೋದರಿಯನ್ನು ಹೊತ್ತ ಬಾಂಗ್ಲಾದೇಶ ವಾಯುಪಡೆಯ ಸಿ -130 ಸಾರಿಗೆ ವಿಮಾನ AJAX1413 ಗಾಜಿಯಾಬಾದ್ ನ ಹಿಂಡನ್ ವಾಯುನೆಲೆಯನ್ನು ತಲುಪಿತು. ಈ ಸಂದರ್ಭದಲ್ಲಿ ಯಾವುದೇ ತುರ್ತು ಅಗತ್ಯಕ್ಕಾಗಿ ಭಾರತೀಯ ವಾಯುಪಡೆಯ ಸಿಬ್ಬಂದಿ ಎರಡು ರಫೇಲ್ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿದ್ದರು.
ಹಸೀನಾ ಅವರ ಜೆಟ್ ವಿಮಾನಕ್ಕೆ ಸುರಕ್ಷತೆ ಒದಗಿಸಲು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಿಂದ 101 ಸ್ಕ್ವಾಡ್ರನ್ ನ ಎರಡು ರಫೇಲ್ ಯುದ್ಧ ವಿಮಾನಗಳು ಬಿಹಾರ ಮತ್ತು ಜಾರ್ಖಂಡ್ ನಲ್ಲಿ ಹಾರಾಟ ನಡೆಸಿದವು. ಐಎಎಫ್ ಮತ್ತು ಸೇನಾ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಮತ್ತು ಜನರಲ್ ಉಪೇಂದ್ರ ದ್ವಿವೇದಿ ಅವರು ಇದರ ಮೇಲ್ವಿಚಾರಣೆ ನಡೆಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296