ಪುಣೆ : ವಾಟ್ಸಾಪ್ ಗ್ರೂಪ್ನಿಂದ ತೆಗೆದು ಹಾಕಿದಕ್ಕೆ ಎಂಬ ಐವರು ಸೇರಿಕೊಂಡು ಗ್ರೂಪ್ ಅಡ್ಮೀನ್ ಗೆ ಥಳಿಸಿ, ನಾಲಿಗೆಯನ್ನೇ ಕತ್ತರಿಸಿದ್ದ ಪುಣೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.
ಇಲ್ಲಿನ ಫರ್ಸುಂಗಿ ಪ್ರದೇಶದಲ್ಲಿ ಒಟ್ಟಿಗೆ ವಾಸಿಸುತ್ತಿರುವ ಕುಟುಂಬಗಳು ಕೂಡಿಕೊಂಡು ಓಂ ಹೈಟ್ಸ್ ಆಪರೇಷನ್ ಎಂಬ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿದ್ದರು. ಆದರೆ, ಈ ಗ್ರೂಪ್ ನಿಂದ ಯಾರೋ ಒಬ್ಬರನ್ನು ತೆಗೆದುಹಾಕಲಾಗಿತ್ತು.
ಈ ಬಗ್ಗೆ ಗ್ರೂಪ್ವನ್ನು ರಚಿಸಿದ್ದ ಮತ್ತು ಅಡ್ಮಿನ್ ಆಗಿದ್ದ ವ್ಯಕ್ತಿಯನ್ನು ಗ್ರೂಪ್ ನಿಂದ ತೆಗೆದುಹಾಕಲ್ಪಟ್ಟ ವ್ಯಕ್ತಿ ಇತರ ನಾಲ್ವರೊಂದಿಗೆ ಸೇರಿಕೊಂಡು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


