ಕೊರಟಗೆರೆ : ಗ್ರಾಮೀಣ ಭಾಗದಲ್ಲಿ ಕುಂಬಾರಿಕೆ ಅಂತಹ ಗುಡಿ ಕೈಗಾರಿಕೆ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಮ್ಮ ಕುಲ ಕಸುಬುಗಳನ್ನ ತರಬೇತಿ ಪಡೆಯುತ್ತಿರುವುದು ಸಂತಸ ತಂದಿದೆ ಎಂದು ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರಮಣಪ್ಪ ತಿಳಿಸಿದರು.
ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಗಂಕಾರನಹಳ್ಳಿ ಗ್ರಾಮದಲ್ಲಿ ಗ್ರಾಮೋದ್ಯೋಗ ವಿಕಾಸ್ ಯೋಜನೆಯಡಿ ಕುಂಬಾರ ಸಶಕ್ತಿಕರಣ ಕಾರ್ಯಕ್ರಮ ಅಡಿಯಲ್ಲಿ ಚಕ್ರ ಕುಂಬಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಂಬಾರ ತರಬೇತಿಯು ಸಾಂಪ್ರದಾಯಕ ಕುಂಬಾರಿಕೆ ಕೌಶಲ್ಯಗಳನ್ನ ಆಧುನಿಕ ಯಂತ್ರಗಳೊಂದಿಗೆ ಸಂಯೋಜಿಸಿ ಮಡಿಕೆ, ಕುಡಿಕೆ, ಅಲಂಕಾರರಿಕ ವಸ್ತುಗಳನ್ನ ತಯಾರಿಸಲು ಕೇಂದ್ರ ಸರ್ಕಾರ ಗ್ರಾಮೋದ್ಯೋಗ ವಿಕಾಸ್ ಯೋಜನೆಯಡಿ ಕುಂಬಾರ ಸಶಕ್ತಿಕರಣ ಕಾರ್ಯಕ್ರಮವನ್ನ ಜಾರಿಗೆ ತಂದಿದ್ದು, ಅದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಲಕು ಎಂದು ತಿಳಿಸಿದರು.
ತರಬೇತಿದಾರ ಸಂಪಂಗಿ ರಾಮಪ್ಪ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೋದ್ಯೋಗ ವಿಕಾಸ್ ಯೋಜನೆಯಡಿ ಗ್ರಾಮೀಣ ಭಾಗ ಬಡತನದಲ್ಲಿರುವ ಕುಂಬಾರ ಸಮುದಾಯಕ್ಕೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಜೀವನ ನಡೆಸಲು ಅನೇಕ ಯೋಜನೆಗಳನ್ನ ಜಾರಿಗೆ ತರಲಾಗಿದೆ. ಕುಂಬಾರಿಕೆ ತಯಾರಿ ತರಭೇತಿಯಲ್ಲಿ ಸುಮಾರು ೨೦ಕ್ಕೂ ಹೆಚ್ಚು ಮಹಿಳೆಯರು ತರಬೇರಿಯನ್ನ ಪಡೆದಿದ್ದಾರೆ. ತರಬೇತಿ ಪಡೆದ ಎಲ್ಲರಿಗೂ ಮುಂದಿನ ದಿನಗಳಲ್ಲಿ ಉಪಕರಣಗಳನ್ನ ನೀಡಲಾಗುತ್ತದೆ ಎಂದು ತಿಳಿಸಿದರು.
ಕುಂಬಾರ ಸಮುದಾಯದ ಮುಖಂಡ ಮೋಹನ್ ಮಾತನಾಡಿ ಗ್ರಾಮೀಣ ಬಾಗದಲ್ಲಿ ಕುಂಬಾರಿಕೆ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೋದ್ಯೋಗ ವಿಕಾಸ್ ಯೋಜನೆಯಡಿ ನಮ್ಮ ಸಮುದಾಯದ ಮಹಿಳೆಯರಿಗೆ ಸುಮಾರು ೧೦ ದಿನಗಳ ಕಾಲ ಜೇಡಿ ಮಣ್ಣಿನಿಂದ ಆರೋಗ್ಯಕರ ಮಡಿಕೆ, ಕುಡಿಕೆ, ವಾಟರ್ ಬಾಟಲ್, ಬಿರಿಯಾನಿ ಬಟ್ಟಲು, ತುಳಸಿ ಕಟ್ಟೆ, ದೀಪ, ಸೇರಿದಂತೆ ಮನೆಯಲ್ಲಿ ಇಡುವಂತ ಅಲಂಕಾರಕ ವಸ್ತುಗಳನ್ನ ತರಬೇತಿ ಪಡೆದಿದ್ದಾರೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಅಶ್ವಥಪ್ಪ, ಮಧುಗಿರಿ ವರದರಾಜು, ರಂಗಸ್ವಾಮಿ, ತರಬೇತಿದಾರರಾದ ಸಂಪಂಗಿರಾಮ್, ಮದರ್ ಸಂಸ್ಥೆಯ ಭಾಸ್ಕರ್, ಲಿಂಗ ದೊರೆ, ಮಮತಾ, ನಾಗಮಣಿ,ಪಾರ್ವತಮ್ಮ, ಲತಾಮಣಿ,ಕಾಂತಮ್ಮ,ರೂಪ, ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


