ಖ್ಯಾತ ನಟಿ ಮಲೈಕಾ ಅರೋರಾ ಕಾರ್ಯಕ್ರಮ ಒಂದನ್ನು ನಡೆಸಿಕೊಟ್ಟಿದ್ದು, ಇದರಲ್ಲಿ ಮಲೈಕಾ ಜೊತೆ ಅವರ ಮಗ ಅರ್ಹಾನ್ ಕೂಡ ಇದ್ದರು. ಈ ವೇಳೆ ಮಲೈಕಾ ತನ್ನ ಮಗನಿಗೆ ವರ್ಜಿನಿಟಿ ಬಗ್ಗೆ ನೀನು ಯಾವಾಗ ಅದನ್ನು ಕಳಕೊಂಡೆ ಪ್ರಶ್ನೆ ಮಾಡಿದ್ದಾರೆ.
ಪಾಡ್ ಕಾಸ್ಟ್ ನ(Podcast) ಟೀಸರ್ ರಿಲೀಸ್ ಆಗಿದೆ. ಅರ್ಹಾನ್ ಖಾನ್ ಹಾಗೂ ಮಲೈಕಾ ಅರೋರ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ವೈಯಕ್ತಿಕ ವಿಷಯಗಳ ಬಗ್ಗೆ ಕೂಡ ಅಮ್ಮ–ಮಗ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಮಾತಾಡಿದ್ದಾರೆ. ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಮಲೈಕಾ ತನ್ನ ಮಗ ಅರ್ಹಾನ್ ಗೆ ಮೊದಲ ಬಾರಿಗೆ ನೀನು ಯಾವಾಗ ಲೈಂಗಿಕತೆಯಲ್ಲಿ ತೊಡಗಿಕೊಂಡೆ ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ನೀನು ಯಾವಾಗ ವರ್ಜಿನಿಟಿ ಕಳೆದುಕೊಂಡೆ ಅಂತಾನು ಕೇಳಿ ಶಾಕ್ ಕೊಟ್ಟಿದ್ದಾರೆ. ತಾಯಿ ಮಲೈಕಾಳ ಪ್ರಶ್ನೆಗೆ ಅರ್ಹಾನ್ ಫುಲ್ ಸೈಲೆಂಟ್ ಆಗಿದ್ದಾನೆ.
ಸರಿಯಾದ ಮತ್ತು ಪ್ರಾಮಾಣಿಕ ಉತ್ತರ ಕೊಡು ಎಂದು ಮಗನಿಗೆ ತಾಕೀತು ಮಾಡಿದ್ದಾರೆ. ಆದರೆ, ಅರ್ಹಾನ್ ಏನು ಉತ್ತರ ನೀಡಿರಬಹುದು ಎಂಬುದಕ್ಕೆ ಏಪಿಸೋಡ್ ಟೆಲಿಕಾಸ್ಟ್ ಆದಮೇಲೆಯೇ ಗೊತ್ತಾಗಲಿದೆ. ಇನ್ನು ಅಮ್ಮನ ಪ್ರಶ್ನೆ ಬಳಿಕ, ಅದೇ ಅಮ್ಮನಿಗೆ ಅರ್ಹಾನ್ ಪ್ರಶ್ನೆ ಮಾಡಿದ್ದಾರೆ. “ನೀವು ಜನರೊಂದಿಗೆ ಬೆರೆಯಲು ಇಷ್ಟಪಡುತ್ತೀರಾ?” ಎಂದಿದ್ದಾನೆ. ಮುಂದುವರಿದು “ನನ್ನ ಮುಂದಿನ ಪ್ರಶ್ನೆ, ನೀವು ಯಾವಾಗ ಮದುವೆಯಾಗುತ್ತೀರಿ?” ಎಂದಿದ್ದಾನೆ. ಹೀಗೆ ತಾಯಿ ಮತ್ತು ಮಗನ ಸಂಭಾಷಣೆಯ ಕಿರು ಪ್ರೋಮೋ ಝಲಕ್ ಸದ್ಯ ವೈರಲ್ ಆಗಿದೆ.
ಎಂಥಾ ಕಾಲ ಬಂದಿದೆಯಪ್ಪಾ? ಅಪ್ಪ-ಮಕ್ಕಳು ಈಗಿನ ಕಾಲದಲ್ಲಿ ಫ್ರೆಂಡ್ ತರ ಇರೋದು ಓಕೆ ಆದ್ರೆ, ಮಗನಿಗೆ ತಾಯಿ, ತಾಯಿಗೆ ಮಗ ಇಂಥಾ ಪ್ರಶ್ನೆ ಕೇಳೋದಾ? ಎಂದು ಜನ ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296