nammatumakuru

    Subscribe to Updates

    Get the latest creative news from FooBar about art, design and business.

    What's Hot

    ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ

    April 12, 2026

    ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ

    April 12, 2026

    ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ

    April 12, 2026
    Facebook Twitter Instagram
    ಟ್ರೆಂಡಿಂಗ್
    • ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ
    • ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ
    • ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ
    • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ: ಅರ್ಜಿ ಸಲ್ಲಿಸಿ
    • ‘ಒಳ ಮೀಸಲಾತಿ ಕುರಿತು ಪರಮೇಶ್ವರ ಹೇಳಿಕೆ ದುರದೃಷ್ಟಕರ’: ಬಿಜೆಪಿ ಟೀಕೆ
    • ಮಧುಗಿರಿ: ₹4.24 ಕೋಟಿ ಹಣ ದುರುಪಯೋಗ ಪ್ರಕರಣ:  ಸೌಮ್ಯಾ ಸೇರಿ ಆರು ಜನರ ವಿರುದ್ಧ ಎಫ್‌ಐಆರ್ ದಾಖಲು
    • ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕ್ರಮಕ್ಕೆ ಸಿಪಿಎಂ ಆಗ್ರಹ
    • ಉದ್ಘಾಟನೆಗೆ ಮುನ್ನವೇ ಬಿರುಕು ಬಿಟ್ಟ ಕೋಟ್ಯಂತರ ವೆಚ್ಚದ ಹಾಸ್ಟೆಲ್: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳ ಆಕ್ರೋಶ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅದೃಷ್ಟ ಒಲಿದು ಬಂದಾಗ
    ಲೇಖನ February 14, 2026

    ಅದೃಷ್ಟ ಒಲಿದು ಬಂದಾಗ

    By adminFebruary 14, 2026No Comments3 Mins Read
    story

    ಬಹಳ ಹಿಂದೆ ಸೂರ್ಯಕೇತು ಎಂಬ ವ್ಯಕ್ತಿಯಿದ್ದ. ಇವನು ತುಂಬಾ ಬಡವ ಮತ್ತು ಮಹಾನ್ ದೈವಭಕ್ತ. ದೇವರ ಧ್ಯಾನಕ್ಕೆ ಕುಳಿತು ಬಹಳ ಹೊತ್ತು ಧ್ಯಾನ ಮಾಡಿ ನಂತರ ಸಿಕ್ಕ ಕೆಲಸ ಮಾಡಿಕೊಂಡು ಬಂದ ಹಣದಿಂದ ಜೀವನ ನಡೆಸುತ್ತಿದ್ದ.

    ಒಂದು ದಿನ ಅವನಿಗೆ ತಾನೂ ಕೂಡ ಶ್ರೀಮಂತನಾಗಬೇಕು ಎಂದು ಆಸೆ ಪಟ್ಟ ಅದಕ್ಕಾಗಿ ಯೋಚಿಸಿದ ದೇವರಲ್ಲಿ ಬೇಡಿದರೆ ತಾನೇ ದೇವರು ನಮಗೆ ಬೇಡಿದ್ದು ನೀಡುವುದು, ನಾವು ಏನನ್ನೂ ಕೇಳಿಕೊಳ್ಳದಿದ್ದರೆ ನಮ್ಮ ಮೊರೆ ಅವನಿಗೆ ಹೇಗೆ ತಿಳಿಯುತ್ತದೆ ಎಂದು ಕೊಂಡು ಅಂದು ಬೆಳಗ್ಗೆ ಬೇಗ ಎದ್ದವನು ಬೇಗ ಸ್ನಾನ ಮುಗಿಸಿ ಧ್ಯಾನ ಮಾಡುತ್ತಾ ಅಮ್ಮಾ ದೇವಿ ಇಂದು ನನಗೆ ನಿಧಿ ಸಿಗುವಂತೆ ಮಾಡು ಎಂದು ಕೇಳಿಕೊಂಡು ಅಂದು ಕೆಲಸ ಹುಡುಕಿಕೊಂಡು ಹೊರಟ, ಅವನ ಮುಗ್ದ ಬೇಡಿಕೆಗೆ ಮನ ಸೋತ ದೇವಿ ತನ್ನ ಸೇವಕರಾದ ಭವ ಮತ್ತು ವಿಭ ಎಂಬುವರನ್ನು ಕಳುಹಿಸಿ ಸೂರ್ಯ ಕೇತುವಿಗೆ ನಿಧಿ ಸಿಗುವಂತೆ ಮಾಡಿಬನ್ನಿ ಎಂದು ಕಳುಹಿಸಿದರು.


    Provided by
    Provided by

    ಭವನು ಸೂರ್ಯಕೇತು ಬರವು ಜಾಗದಲ್ಲಿ ಒಂದು ನಿಧಿಯ ಗಂಟು ಇಟ್ಟು ಅಲ್ಲಿಂದ ಅದೃಶ್ಯನಾದನು. ಸೂರ್ಯಕೇತು ಮುಂದೆ ಬಂದವನು ನಿಧಿಯ ಗಂಟು ನೋಡಿ ಅದನ್ನು ಕೈಯಲ್ಲಿ ಹಿಡಿದು ಅರೆ ನಿಧಿಯ ಗಂಟು ಯಾರದರೂ ಬೀಳಿಸಿಕೊಂಡು ಹೋಗಿರಬಹುದೇ ಎಂದು ಕೊಂಡು ಸುತ್ತ ಮುತ್ತ ನೋಡಿದಾಗ ಅಲ್ಲೊಬ್ಬರು ವರ್ತಕರು ನಿಂತಿರುವುದನ್ನು ನೋಡಿ ಅವನಿಗೆ ಸ್ವಾಮಿ ಈ ನಿಧಿಯ ಗಂಟು ನಿಮ್ಮದೇ ಎಂದಾಗ ತಾನಾಗಿಯೇ ತನ್ನ ಕೈಗೆ ಬಂದ ನಿಧಿಯ ಗಂಟನ್ನು ನೋಡಿ ವರ್ತಕ ಹೌದು ಇದು ನನ್ನದೇ ಇದನ್ನೇ ಹುಡುಕುತಿದ್ದೆ ಎಂದು ಹೇಳುತ್ತಾ ಅದನ್ನು ತೆಗೆದುಕೊಂಡು ಅಲ್ಲಿಂದ ಹೊರಟು ಹೋದನು.

    ಎರಡನೆಯ ದಿನ ಧ್ಯಾನ ಮುಗಿಸಿ ಇಂದಾದರೂ ನಿಧಿ ಗಂಟು ಸಿಗುವಂತೆ ಮಾಡು ಎಂದು ಪ್ರಾರ್ಥಿಸುತ್ತಾ ಕೆಲಸ ಹುಡುಕಲು ಹೊರಟ. ಅಂದು ಕೂಡ ಮಾತೆಯ ಆಜ್ಞೆಯಂತೆ ಭವ ದಾರಿಯಲ್ಲಿ ಒಂದು ನಿಧಿ ಗಂಟನ್ನು ಇಟ್ಟು ಮಾಯವಾದನು. ಅದನ್ನು ನೋಡಿದ ಸೂರ್ಯಕೇತು ಓ ಇದು ಕೂಡ ನಿಧಿಯ ಗಂಟು ಎಂದು ಗುರುತಿಸಿ ಇನ್ನೇನು ಕೈಗೆ ತೆಗೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ರಾಜಭಟರಿಬ್ಬರು ಬರುತ್ತಿರುವುದನ್ನು ನೋಡಿ ಓಹೋ ಇದು ಅವರದ್ದಾಗಿಬಹುದು ನಾನು ಇದನ್ನು ಮುಟ್ಟಿದರೆ ನನ್ನನ್ನು ಕಳ್ಳ ಎಂದುಕೊಳ್ಳುತ್ತಾರೆ ಎಂದುಕೊಂಡು ಅಲ್ಲಿಂದ ಸರಸರನೆ ಮುಂದೆ ನಡೆದ. ಮತ್ತ ಮಾರನೆಯ ದಿನ ಮಾತೆಯ ಪ್ರಾರ್ಥನೆ ಮುಗಿಸಿ ಇಂದಾದರೂ ನಿಧಿಗಂಟು ಕರುಣಿಸು ಎಂದುಕೊಳ್ಳುತ್ತಾ ಬರುವಾಗ ಮತ್ತೆ ಮಾತೆ ಆಜ್ಞಾನುಸಾರ ಭವ ಮತ್ತೊಂದು ನಿಧಿ ಗಂಟು ಇಟ್ಟು ಮಾಯವಾದ. ಅದನ್ನು ಕೈಗೆ ತೆಗೆದುಕೊಂಡ ಸೂರ್ಯಕೇತು ಓಹೋ ಇದು ಕೂಡ ನಿಧಿಯಗಂಟು ಇದು ಮಾತೆ ನನಗಾಗಿ ಕರುಣಿಸಿರಬಹುದೇ ಎಂದು ಯೋಚಿಸುತ್ತಾ ಮುಂದೆ ನಡೆದು ಬರುತ್ತಿರುವಾಗ ಮಾತೆದೇವಿಯ ಉತ್ಸವ ಬರುತ್ತಿರುವುದನ್ನು ನೋಡಿ ಓಹೋ ಮಾತೆ ನನ್ನನ್ನು ಪರೀಕ್ಷಿಸಲು ಹೀಗೆ ಮಾಡಿರಬಹುದು, ಇದು ಮಾತೆಯ ನಿಧಿ, ನಾನು ತೆಗೆದುಕೊಳ್ಳುವುದು ಉಚಿತವಲ್ಲ ಇದನ್ನು ಮಾತೆಗೇ ಅರ್ಪಿಸುತ್ತೇನೆ ಎಂದು ಮಾತೆಯ ಹುಂಡಿಯಲ್ಲಿ ನಿಧಿಯ ಗಂಟನ್ನು ಹಾಕಿ, ದೇವಿಮಾತೆ ನಾನು ಕೃತಾರ್ಥನಾದೆ ನಿನ್ನ ದಯೆಯಿಂದ, ನೋಡು ನೀನು ಒಡ್ಡಿದ್ದ ಪರೀಕ್ಷೆಯಲ್ಲಿ ನಾನು ಗೆದ್ದಿದ್ದೇನೆ ಎಂದು ಬೀಗುತ್ತಾ ಎಂದು ಕೈಮುಗಿದು ಅಲ್ಲಿಂದ ಹೊರಟು ಹೋದನು.

    ಈ ಬಾರಿ ಭವ ವಿಭರು ಮಾತೆಯಲ್ಲಿ ಅಮ್ಮಾ ಈಬಾರಿ ನಿಧಿಯ ಗಂಟು ಇಟ್ಟು ಬರೋಣವೇ ಎಂದಾಗ ಮಾತೆಯು  ಏನೂ ಬೇಡ ಆತನ ಕೋರಿಕೆ ಈಡೇರಿಸಲು ನಾನು 3 ಬಾರಿ ಅದೃಷ್ಟ ಕೊಟ್ಟಿದ್ದೆ ಮೊದಲನೇ ಬಾರಿ ತನಗೆ ನಿಧಿಯ ಮೂಲಕ ಸಿಕ್ಕಿದ್ದ ಅದೃಷ್ಟವನ್ನು ಮೂರ್ಖತನದಿಂದ ತಾನೇ ಹೋಗಿ ತನ್ನ ಕೈಯಾರ ವರ್ತಕನಿಗೆ ಕೊಟ್ಟ, ಎರಡನೇ ಬಾರಿ ಅದು ರಾಜಭಟರದ್ದು ಆಗಿರಬಹುದೆಂದು ಎಂದು ಕಲ್ಪಿಸಿಕೊಂಡು ಒಂದು ಕ್ಷಣ ನಿಂತು ಸತ್ಯ ನೋಡದೇ ಅದನ್ನು ಅಲ್ಲಿಯೇ ಬಿಟ್ಟು ಹೋದ, ಮೂರನೇ ಬಾರಿ ನಾನು ಕೊಟ್ಟ ನಿಧಿಯನ್ನು ನನಗೇ ಹಿಂತುರುಗಿಸಿದ, ಇವೆಲ್ಲವೂ ಕೆಲವು ವ್ಯಕ್ತಿಗಳ ಮಾನಸಿಕ ಕಲ್ಪನೆಯ ವಿಕಲ್ಪವಾಗಿರುತ್ತದೆ. ಅವರಿಗೆ ಅದೃಷ್ಟಬಂದಾಗಲೆಲ್ಲಾ ಅದನ್ನು ಹೇಗೆ ತನ್ನ ಕೈವಶ ಮಾಡಿಕೊಳ್ಳಬೇಕು ಎಂಬುದರ ತಿಳಿ ಸತ್ಯ ಕೂಡ ತಿಳಿದಿರುವುದಿಲ್ಲ. ಕೈಗೆ ಸಿಕ್ಕ ಅದೃಷ್ಟ ಕೈತಪ್ಪಿ ಹೋದ ನಂತರ ಅವರ ಅರಿವಿಗೆ ಬರುತ್ತದೆ ಇದು ನನ್ನದೇ ತಪ್ಪು ಎಂದು, ಇದು ಕೂಡ ಹಾಗೆಯೆ ಎಂದಾಗ ಭವ – ವಿಭರು ಮಾತೆಗೆ ಕೈಮುಗಿದು ಲೀನರಾದರು.

    ನೀತಿ: ದೇವರು ಕೊಟ್ಟು ನೋಡುತ್ತಾನೆ, ಆದರೆ ಅದನ್ನು ಪಡೆದುಕೊಳ್ಳುವ ಯೋಗ ನಮ್ಮ ಹಣೆಯಲ್ಲಿ ಬರೆದಿರಬೇಕು.

    venugopal
    ರಚನೆ: ವೇಣುಗೋಪಾಲ್

    ಸಂಪಾದಕರ ನುಡಿ

    ಈ ದಿನದ ಕಥೆ “ಅದೃಷ್ಟ ಒಲಿದು ಬಂದಾಗ…” ಎಂಬ ಶೀರ್ಷಿಕೆಯಡಿ, ಮಾನವನ ಮನಸ್ಥಿತಿ ಮತ್ತು ಅದೃಷ್ಟದ ನಡುವಿನ ಸೂಕ್ಷ್ಮ ಸಂಬಂಧವನ್ನು ಅತ್ಯಂತ ಸರಳವಾಗಿ ಆದರೆ ಗಂಭೀರ ಅರ್ಥದೊಂದಿಗೆ ನಿರೂಪಿಸುತ್ತದೆ. ದೇವರು ಅವಕಾಶವನ್ನು ಕೊಡುತ್ತಾನೆ; ಆದರೆ ಅದನ್ನು ಗುರುತಿಸಿ, ಧೈರ್ಯದಿಂದ ಸ್ವೀಕರಿಸುವ ವಿವೇಕ ನಮ್ಮೊಳಗಿರಬೇಕೆಂಬ ಸತ್ಯವನ್ನು ಈ ಕಥೆ ಸ್ಪಷ್ಟಪಡಿಸುತ್ತದೆ. ಸೂರ್ಯಕೇತು ಎಂಬ ಪಾತ್ರದ ಮೂಲಕ ಸಂಶಯ, ಭಯ, ಅತಿಯಾದ ನೀತಿಭಾವನೆಗಳು ಹೇಗೆ ಕೈಗೆ ಬಂದ ಅದೃಷ್ಟವನ್ನೇ ಕೈತಪ್ಪಿಸಿಕೊಳ್ಳುವಂತೆ ಮಾಡುತ್ತವೆ ಎಂಬುದನ್ನು ಕಥೆ ಪರಿಣಾಮಕಾರಿಯಾಗಿ ತೋರಿಸಿದೆ.

    ಇದು ಕೇವಲ ಧಾರ್ಮಿಕ ಕಥೆಯಲ್ಲ; ಪ್ರತಿಯೊಬ್ಬರ ಜೀವನದಲ್ಲೂ ಮರುಕಳಿಸುವ ಅನುಭವದ ಪ್ರತಿಬಿಂಬ. ಅವಕಾಶ ಬಂದಾಗ ಅದನ್ನು ಪರೀಕ್ಷೆಯೆಂದು ಮಾತ್ರ ನೋಡದೇ, ಜವಾಬ್ದಾರಿಯುತವಾಗಿ ಬಳಸಿಕೊಳ್ಳುವ ಜ್ಞಾನ ಅಗತ್ಯವೆಂಬ ಸಂದೇಶವನ್ನು ಕಥೆ ಸಾರುತ್ತದೆ. ನೀತಿಯ ಸಾಲು — “ದೇವರು ಕೊಟ್ಟು ನೋಡುತ್ತಾನೆ, ಆದರೆ ಅದನ್ನು ಪಡೆದುಕೊಳ್ಳುವ ಯೋಗ ನಮ್ಮ ಹಣೆಯಲ್ಲಿ ಬರೆದಿರಬೇಕು” — ಓದುಗರನ್ನು ಆತ್ಮಪರಿಶೀಲನೆಗೆ ಪ್ರೇರೇಪಿಸುತ್ತದೆ.

    ಅರ್ಥಪೂರ್ಣ ಸಂದೇಶ ಹೊಂದಿದ ಈ ಕಥೆಯನ್ನು ರಚಿಸಿದ ಶ್ರೀ ವೇಣುಗೋಪಾಲ್ ಅವರಿಗೆ ಅಭಿನಂದನೆಗಳು. ಇಂತಹ ಚಿಂತನೆಗೆ ದಾರಿ ಮಾಡಿಕೊಡುವ ಸಾಹಿತ್ಯವು ಸಮಾಜಕ್ಕೆ ಸದಾ ದಾರಿದೀಪವಾಗಿರುತ್ತದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಚಿತ್ರೀಕರಣ ಪೂರೈಸಿದ ‘ಶಿಲ್ಪಾ ಶ್ರೀನಿವಾಸ್’: ಫ್ಯಾಮಿಲಿ ಸ್ಟಾರ್ ಅಭಿಜಿತ್ ನೃತ್ಯದೊಂದಿಗೆ ಕ್ಲೈಮ್ಯಾಕ್ಸ್ ಪೂರ್ಣ!

    April 6, 2026

    ಭೀಮನಿಗೆ ಹುಚ್ಚು ನಾಯಿ ಕಡಿಯಿತು | ಹಾಸ್ಯ ಡ್ರಾಮ: ಅರಳಿ ಕಟ್ಟೆ ಮಿತ್ರರು. (ಪ್ರಸಂಗ 3)

    April 6, 2026

    ನಡೆಯುವ ದೇವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು

    April 1, 2026

    Leave A Reply Cancel Reply

    Our Picks

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ

    April 12, 2026

    ಬೀದರ್ : ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದ್ದೀವಾ? ಎಂದು ಪತ್ರಕರ್ತರು ತಮ್ಮನ್ನು ತಾವು ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

    ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ

    April 12, 2026

    ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ

    April 12, 2026

    ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ: ಅರ್ಜಿ ಸಲ್ಲಿಸಿ

    April 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.