ಮಹಾರಾಷ್ಟ್ರ: ದೋಣಿಯೊಂದು ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದು ಐವರು ನಾಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಚಮೋರ್ಶಿಯ ಘನಪುರ ಘಾಟ್ ಬಳಿ ವನಗಂಗಾ ನದಿಯಲ್ಲಿ ಮೆಣಸಿನಕಾಯಿ ಕತ್ತರಿಸಲು ಏಳು ಮಹಿಳೆಯರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ದೋಣಿ ಮಗುಚಿ ಬಿದ್ದಿದ್ದು,
ದೋಣಿ ನಿರ್ವಾಹಕ ಈಜಿ ದಡಕ್ಕೆ ಬಂದರೆ, ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ನೀರಿನಲ್ಲಿ ಮುಳುಗಿದರು. ಏಳು ಮಹಿಳೆಯರ ಪೈಕಿ ಒಬ್ಬರನ್ನು ರಕ್ಷಿಸಲಾಗಿದ್ದು, ಓರ್ವ ಮಹಿಳೆಯ ಮೃತಪಟ್ಟಿದ್ದಾರೆ. ಐವರು ನಾಪತ್ತೆಯಾಗಿದ್ದಾರೆ.
ಸ್ಥಳೀಯ ಈಜುಗಾರರ ಸಹಾಯದಿಂದ ರಕ್ಷಣಾ ತಂಡವು ನಾಪತ್ತೆಯಾದ ಮಹಿಳೆಯರಿಗಾಗಿ ಹುಡುಕಾಟ ನಡೆಸುತ್ತಿದೆ. ಸ್ಥಳಕ್ಕೆ ಚಮೋರ್ಶಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


