ಬೆಂಗಳೂರು: ನಟಿ ರನ್ಯಾ ರಾವ್ ಅವರನ್ನು ಬಳಸಿಕೊಂಡು ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಆ ಇಬ್ಬರು ಪ್ರಭಾವಿ ಸಚಿವರು ಯಾರು ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಪ್ರಶ್ನೆ ಮಾಡಿದೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಯಾರು ಆ ಗೋಲ್ಡ್ ಸ್ಮಗ್ಲಿಂಗ್ ಸಚಿವರು? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಕೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮ ಶೇ. 60ರಷ್ಟು ಕಮಿಷನ್ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಚಿನ್ನ ಕಳ್ಳಸಾಗಣಿಕೆಯೂ ಕೂಡ ಒಂದು ಭಾಗವೇ? ಎಂದು ಪ್ರಶ್ನಿಸಿದೆ.
ಗೋಲ್ಡ್ ಸ್ಮಗ್ಲಿಂಗ್ ಸಿಂಡಿಕೇಟ್ ಜೊತೆ ಹವಾಲಾ ದಂಧೆಯಲ್ಲಿಯೂ ಕಾಂಗ್ರೆಸ್ ಕೈವಾಡವಿರುವುದು ಬೆಳೆಕಿಗೆ ಬಂದಿದೆ. ಇನ್ನೂ ಚಿನ್ನದ ಕಳ್ಳ ಮಂತ್ರಿಯ ಬಗ್ಗೆ ವಿಧಾನಸೌಧದ ಪಡಸಾಲೆಯಲ್ಲಿ ಗುಸುಗುಸು ಜೋರಾಗಿದೆ ಎಂದು ಟೀಕಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4