ತುಮಕೂರು: ಜಿಲ್ಲೆಯ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ಹಾಗೂ ಸಾಮಾನ್ಯ ವೀಕ್ಷಕರಾದ ಕೆ.ವಾಸವ ಮತ್ತು ಮತಎಣಿಕೆ ವೀಕ್ಷಕರಾದ ಸಿಮ್ಮಿ ನಾಹಿದ್ ಅವರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಬಾಗಿಲು ತೆರೆಯಲಾಯಿತು.
ಇಬ್ಬರು ನಾಯಕರ ಭವಿಷ್ಯದ ಲೋಕಸಭೆ ಮತ ಎಣಿಕೆಗೆ ಕೌಂಟ್ ಡೌನ್ ಆರಂಭವಾಗಿದೆ. ಬೆಳಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಮ್ ಓಪನ್ ಮೊದಲು ಅಂಚೆ ಮತ ಏಣಿಕೆ ಮಾಡಲಾಯಿತು.
ತುಮಕೂರು ವಿವಿ ವಿಜ್ಞಾನ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಎರಡು ಕಡೆ ಮತ ಎಣಿಕೆ ನಡೆಯುತ್ತಿದೆ. ವಿವಿ ವಿಜ್ಞಾನ ಕಾಲೇಜಿನಲ್ಲಿ ಚಿಕ್ಕನಾಯಕನಹಳ್ಳಿ, ತಿಪಟೂರು,ತುರುವೇಕೆರೆ, ಮಧುಗಿರಿ ತಾಲ್ಲೂಕಿನ ಮತ ಎಣಿಕೆಯಾಗುತ್ತಿದೆ.
ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತುಮಕೂರು ನಗರ, ಗ್ರಾಮಾಂತರ ಕೊರಟಗೆರೆ, ಗುಬ್ಬಿ ತಾಲ್ಲೂಕಿನ ಮತ ಎಣಿಕೆಯಾಗುತ್ತಿದೆ. ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೂ 14 ಮತ ಎಣಿಕೆ ಟೇಬಲ್ ಗಳಂತೆ ಒಟ್ಟು 112 ಟೇಬಲ್ ನಲ್ಲಿ ಮತ ಎಣಿಕೆ ನಡೆಸಲಾಗುತ್ತಿದೆ.
* 448 ಸಿಬ್ಬಂದಿಯಿಂದ ನಡೆಯಲಿರುವ ಮತ ಎಣಿಕೆ ಕಾರ್ಯ
* ಪ್ರತ್ಯೇಕ 18 ಟೇಬಲ್ ಗಳಲ್ಲಿ ಅಂಚೆ ಮತ ಎಣಿಕೆ
* ಮತ ಎಣಿಕೆ ಕೇಂದ್ರದಲ್ಲಿ ಪೊಲೀಸ್ ಬಿಗಿ ಭದ್ರತೆ
* ಮತ ಎಣಿಕೆಗೆ ಆಗಮಿಸುವ ಏಜೆಂಟರ್ ಗಳಿಗೆ ಪಾಸು ವಿತರಣೆ
* ಮೊಬೈಲ್ ಕ್ಯಾಮರ, ಕ್ಯಾಲಿಕ್ಯುಲೇಟರ್, ಸ್ಮಾರ್ಟ್ ವಟಚ್, ಪೆನ್, ಸಿಗರೇಟ್, ಬೀಡಿ, ಮದ್ಯ, ನೀರಿನ ಬಾಟಲ್, ಇಂಕ್ ಪೆನ್ ತರುವುದು ನಿಷೇಧ
ಮತ ಎಣಿಕೆ ಕೇಂದ್ರದಲ್ಲಿ ನಾಲ್ವರು ಡಿವೈಎಸ್ಪಿ. 15 ಸಿಪಿಐ, 29 ಪಿಎಸ್ಐ, 48 ಎಎಸ್ ಐ, 277 ಪೊಲೀಸ್ ಸಿಬ್ಬಂದಿ, 42 ಮಹಿಳಾ ಪೊಲೀಸರು, 63 ಕೆಎಸ್ಆರ್ಪಿ, 40 ಸಿಎಪಿಎಫ್ ನೇಮಕ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA