ತುಮಕೂರು: ತುಮಕೂರು ನಗರದ ವಿದ್ಯಾನಿಧಿ ಪಿಯು ಕಾಲೇಜು ಬಳಿ ಕಾಲೇಜಿನ ಸಹಪಾಠಿಯನ್ನು ಮಾತನಾಡಿಸಿದ ಎಂಬ ವಿಚಾರಕ್ಕೆ ಯುವಕರ ನಡುವೆ ಗಲಾಟೆ ನಡೆದಿದ್ದು ವಿದ್ಯಾರ್ಥಿಯೊಬ್ಬನಿಗೆ ಗುಂಪೊಂದು ಮನಬಂದಂತೆ ಹಲ್ಲೆ ನಡೆಸಿದೆ.
ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜಯವರ್ಧನ್ ಹಲ್ಲೆಗೆ ಒಳಗಾದ ವಿದ್ಯಾರ್ಥಿಯಾಗಿದ್ದು, ವಿದ್ಯಾನಿಧಿ ಕಾಲೇಜಿನಲ್ಲಿ 2nd ಪಿಯುಸಿ ಓದುತ್ತಿದ್ದಾನೆ.
ಮನೋಜ್ ಹಾಗೂ ಗಣೇಶ್ ಎಂಬುವರಿಂದ ಹಲ್ಲೆ ನಡೆದಿದೆ. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಡಿಗ್ರಿ ಮಾಡುತ್ತಿರುವ ಮನೋಜ್ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬಳನ್ನ ಪ್ರೀತಿಸುತ್ತಿದ್ದನು. ಆ ವಿದ್ಯಾರ್ಥಿನಿಯ ಜೊತೆ ಜಯವರ್ಧನ್ ಮಾತನಾಡ್ತಾನೆ ಎಂಬ ವಿಚಾರಕ್ಕೆ ಗಲಾಟೆ ನಡೆದಿದೆ.
ನಮ್ಮ ಹುಡುಗಿಯ ಜೊತೆ ಯಾಕೆ ಮಾತನಾಡ್ತಿಯಾ ಅಂತ ಜಯವರ್ಧನ್ ಗೆ ಪೋನ್ ನಲ್ಲಿ ಬೆದರಿಕೆ ಹಾಕಿದ್ದ ಮನೋಜ್, ಇಷ್ಟಲ್ಲದೆ ಕಾಲೇಜು ಬಳಿ ಬಂದು ತನ್ನ ಸ್ನೇಹಿತ ಗಣೇಶ್ ಎಂಬಾತನ ಜೊತೆ ಸೇರಿ ಜಯವರ್ಧನ್ ಮೇಲೆ ಹಲ್ಲೆ ಮಾಡಿದ್ದಾನೆ.
ಜಯವರ್ಧನ್ ಮುಖಕ್ಕೆ ಗುದ್ದಿ ಮನಬಂದಂತೆ ಹಲ್ಲೆ ನಡೆಸಿರುವ ಮನೋಜ್ ನನ್ನ ನೋಡಿದ ಕಾಲೇಜಿನ ಬಸ್ ಚಾಲಕರು ಕೂಡಲೇ ಹಲ್ಲೆ ನಡೆಸುತ್ತಿದ್ದ ಮನೋಜ್ ನನ್ನ ಹಿಡಿದು ಕಾಲೇಜು ಪ್ರಾಂಶುಪಾಲರಿಗೆ ಒಪ್ಪಿಸಿದ್ದಾರೆ.
ಈ ವೇಳೆ ಗಣೇಶ್ ನಾಪತ್ತೆಯಾಗಿದ್ದಾನೆ. ಘಟನೆ ಸಂಬಂಧ ಹಲ್ಲೆಗೊಳಗಾದ ಜಯವರ್ಧನ್ ಪೋಷಕರಿಂದ ಎನ್ ಇಪಿಎಸ್ ಪೊಲೀಸ್ ಠಾಣೆಗೆ ಮನೋಜ್ ವಿರುದ್ಧ ದೂರು ನೀಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q