ಶಾಸಕ ಪ್ರದೀಪ್ ಈಶ್ವರ್ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಖಾಕಿ ಶರ್ಟ್ ಧರಿಸಿ ಆಟೋ ಚಲಾಯಿಸುತ್ತಾ ಕಾರ್ಯಕ್ರಮಕ್ಕೆ ಬಂದು ಎಲ್ಲರ ಗಮನ ಸೆಳೆದಿದ್ದಾರೆ.
ಚಿಕ್ಕಬಳ್ಳಾಪುರದ ಸರ್ ಎಂ ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಟೋ ಚಾಲಕರಿಗೆ 5,000 ರೂ. ಸಹಾಯ ಧನ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದು ಶಾಸಕ ಪ್ರದೀಪ್ ಈಶ್ವರ್ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಟೋ ಚಾಲಕರ ಕಷ್ಟ ನನಗೆ ಗೊತ್ತಿದೆ. ನಾನು ಕೂಡ ಕಷ್ಟ ಪಟ್ಟಿದ್ದೀನಿ. ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಮೂಟೆ ಹೊತ್ತಿದ್ದೀನಿ. 50 ರೂ. ಸಿಗುತ್ತೆ ಅಂತ ಹಿಂದೆ ಆಟೋ ಓಡಿಸಿದ್ದೀನಿ ಎಂದು ನೆನಪಿಸಿಕೊಂಡರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA