ವಿಧಾನಸಭೆಯ ಕಲಾಪದಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ, ಗಮನ ಸೆಳೆಯುವ ಸೂಚನೆ ಅಡಿಯಲ್ಲಿ, ಆರ್. ಆರ್. ನಗರ ಅಧಿಕಾರಿಗಳ ಅಮಾನತ್ತು ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಸದನದಲ್ಲಿ ಮಾತನ್ನಾಡಿದ ಅವರು ಡಿಸಿಎಂ ಸದನದಲ್ಲಿ ಖುದ್ದಾಗಿ ಹಾಜರಿದ್ದಿದ್ರೆ ಉತ್ತಮವಾಗಿತ್ತು. ಆರ್. ಆರ್ ನಗರದಲ್ಲಿ ಅಧಿಕಾರಿಗಳ ಅಮಾನತು ಕಾರ್ಯ ಪ್ರಾರಂಭವಾಗಿದೆ. ಸುಮಾರು ೧೧೮ ಕೋಟಿ ಹಗರಣ ಅಂತ ಅಧಿಕಾರಿಗಳ ಅಮಾನತು ಮಾಡಿದ್ದಾರೆ.
ಒಂದು ಕ್ಷೇತ್ರದಲ್ಲಿ ೧೧೮ ಕೋಟಿ ಹಗರಣ ಅಂದ್ರೆ ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ೩ ಸಾವಿರ ಕೋಟಿ ಹಗರಣ ಅಂತಾಯ್ತು. ಎಲ್ಲ ಕ್ಷೇತ್ರ ಬಿಟ್ಟು ಒಂದೇ ಕ್ಷೇತ್ರದ ಮೇಲೆ ಯಾಕೆ ದ್ವೇಷ? ರಾಜಕಾರಣಿಗಳು ಶಾಮೀಲಾಗಿದ್ದಾರೆ ಅಂತ ಉತ್ತರದಲ್ಲಿ ಹೇಳುತ್ತಾರೆ. ಯಾರು ರಾಜಕಾರಣಿಗಳು ಅಂತ ಉತ್ತರ ಕೊಡಬೇಕಲ್ಲವಾ? ಇದು ಬೆಂಗಳೂರು ನಗರಕ್ಕೆ ಸಂಬಂಧಿಸಿದ್ದು. ದಯವಿಟ್ಟು ನನಗೆ ಡಿಸಿಎಂ ಇರುವ ಸಂದರ್ಭದಲ್ಲಿ ಅರ್ಧ ಗಂಟೆಗೆ ಚರ್ಚೆಗೆ ಅವಕಾಶ ನೀಡಿ. ಇದು ಬಹಳ ಗಂಭೀರವಾದ ಪ್ರಶ್ನೆ. ಒಬ್ಬರು ಇಬ್ಬರು ಅಮಾನತು ಆದ್ರೆ ಓಕೆ, ಮೂವತ್ತು ದಿನಗಳಲ್ಲಿ ೧೫ ಮಂದಿ ಅಮಾನತು ಆಗಿರುವುದು. ಅರ್ಧ ಗಂಟೆಗೆ ಚರ್ಚೆಗೆ ಅವಕಾಶ ನೀಡಿ.
ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಯಾಕಿಷ್ಟು ದ್ವೇಷ? ಎಂದ ಮುನಿರತ್ನ. ಇದಕ್ಕೆ ಸದನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿದ್ದು, ಲೋಕಾಯುಕ್ತದಲ್ಲಿ ಈ ಸಂಬಂಧ ವಿಚಾರಣೆ ನಡೆಯುತ್ತಿದೆ. ಪ್ರಾದೇಶಿಕ ಅಧಿಕಾರಿ ಮೇಲ್ವಿಚಾರಣೆಯಲ್ಲೂ ಕೂಡ ತನಿಖೆ ನಡೆಯುತ್ತಿದೆ. ಇದರಲ್ಲಿ ೧೫೦ ಕೋಟಿ ಕೆಲಸ ಮಾಡದೆ ಹೆಚ್ಚುವರಿ ಬಿಲ್ ಎತ್ತಿರುವ ಆರೋಪ ಇದೆ. ಇದರಲ್ಲಿ ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ. ಹಿಂದೆ ಏನೇನು ನಡಿದೆದೆ ಎಲ್ಲದೂ ತನಿಖೆ ಆಗುತ್ತಿದೆ ಎಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


