ಹಾವೇರಿ: ಜಿಲ್ಲೆ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಸ್ವಂತ ಅಣ್ಣನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿ ಮೈದುನ ಪರಾರಿಯಾದ ಘಟನೆ ನಡೆದಿದೆ.
ಗೀತಾ ಮರಿಗೌಡ(32), ಮಕ್ಕಳಾದ ಅಕುಲ್(10), ಅಂಕಿತಾ(7) ಕೊಲೆಯಾದವರು. ಮೂವರನ್ನು ಕೊಲೆ ಮಾಡಿ ಮೈದುನ ಕುಮಾರಗೌಡ್(35) ಪರಾರಿಯಾಗಿದ್ದಾನೆ.
ಮೃತ ಗೀತಾ ಗಂಡ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಥಳಕ್ಕೆ ಹಾನಗಲ್ ಠಾಣೆ ಸಿಪಿಐ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


