ಮಹಿಳೆಯೊಬ್ಬರು ಹಾಡಹಗಲೇ ಪತಿಯನ್ನು ಭೀಕರವಾಗಿ ಹತ್ಯೆಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ. ಹತ್ಯೆಗೈದ ಆರೋಪಿ ಪತ್ನಿಯನ್ನು ಗಾಯತ್ರಿ ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ ಗಾಯತ್ರಿ ಮತ್ತು ಪತಿ ಸತ್ಯಪಾಲ್ ಗಳು ಆಗಾಗ ಜಗಳವಾಡುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಗುರುವಾರವೂ ಜಗಳವಾಡಿದ್ದು ಕೋಪಗೊಂಡ ಪತ್ನಿ ಪತಿಯನ್ನು ನೆಲಕ್ಕೆ ಉರುಳಿಸಿ, ಅವನ ಎದೆಯ ಮೇಲೆ ಕುಳಿತು, ತಲೆಗೆ ಇಟ್ಟಿಗೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾಳೆ.ಮಾತ್ರವಲ್ಲದೆ ಆತನ ಮೆದುಳನ್ನು ಹೊರ ತೆಗೆದಿದ್ದಾಳೆ ಎನ್ನಲಾಗಿದೆ.
ಘಟನೆಯ ನಂತರ ಮಹಿಳೆ ಪೊಲೀಸರಿಗೆ ಶರಣಾಗಿದ್ದಾಳೆ.ಪ್ರಕರಣ ದಾಖಲಿಸಿದ ಪೋಲಿಸರು ಮೃತದೇಹವನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೃತ ಸತ್ಯಪಾಲ್ ಪತ್ನಿ ಗಾಯತ್ರಿ ಮತ್ತು ಮಕ್ಕಳು ಹಾಗೂ. ಸತ್ಯಪಾಲ್ ನ ವೃದ್ಧ ತಾಯಿಯೊಂದಿಗೆ ಶಹಜಹಾನ್‌ಪುರದ ಹತೌರಾ ಬುಜುರ್ಗ್ ಗ್ರಾಮದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296