ಲೈಂಗಿಕ ಕ್ರಿಯೆ ನಡೆಸಬೇಕಾದ್ರೆ ನಾನು ಪತ್ನಿಗೆ 1,500(ಅಂದಾಜು 15 ಡಾಲರ್) ರೂ ನೀಡಬೇಕು. ಹಾಗಾಗಿ ನನಗೆ ಆಕೆಯಿಂದ ವಿಚ್ಛೇದನ ನೀಡಿ ಎಂದು ಪತಿಯೊಬ್ಬ ನ್ಯಾಯಾಲಯದ ಮೆಟ್ಟಿಲೇರಿದ್ದು, ಆತನ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.
ತೈವಾನ್ ನಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. 2014ರಲ್ಲಿ ಈ ಜೋಡಿ ವಿವಾಹವಾಗಿತ್ತು. 3 ವರ್ಷಗಳ ಕಾಲ ಎಲ್ಲವೂ ಚೆನ್ನಾಗಿತ್ತಂತೆ. 2017ರಲ್ಲಿ ತಿಂಗಳಿಗೊಮ್ಮೆ ಲೈಂಗಿಕ ಸಂಪರ್ಕ ಹೊಂದುವ ಸ್ಥಿತಿ ಬಂತು. 2019ರಲ್ಲಿ ಪತ್ನಿ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ಸೂಚಿಸಿಲ್ಲ. ಒತ್ತಾಯ ಮಾಡಿದಾಗ ಮಾತನಾಡುವುದನ್ನೇ ಬಿಟ್ಟಿದ್ದಳು ಎಂದು ಪತಿ ಕೋರ್ಟ್ ಮುಂದೆ ಅಳಲು ತೋಡಿಕೊಂಡಿದ್ದಾನೆ.
ಇದಾದ ನಂತರ ಪತಿಯ ಬಲವಂತಕ್ಕೆ ಲೈಂಗಿಕ ಸಂಪರ್ಕ ಹೊಂದಲು ಒಪ್ಪಿದ್ದು, ಆದರೆ ಒಂದು ಬಾರಿ ಲೈಂಗಿಕ ಸಂಪರ್ಕ ಹೊಂದಲು 1500 ರೂಪಾಯಿ ಅಂದ್ರೆ ಸುಮಾರು 15 ಡಾಲರ್ ಹಣ ಕೊಡಬೇಕು ಎಂದು ಷರತ್ತು ವಿಧಿಸಿದ್ದಾಳೆ.
ಇದು ಮುಂದುವರಿಯುತ್ತಾ ಹೋದಂತೆ ಪತ್ನಿಯೊಂದಿಗೆ ಮಾತನಾಡಲೂ ಹಣ ಕೊಡುವ ಪರಿಸ್ಥಿತಿ ಆತನದ್ದಾಗಿತ್ತು. ಪತ್ನಿ ಮಾತು ಬಿಟ್ಟಿದ್ದಲ್ಲದೇ, ಮಾತನಾಡುವುದಕ್ಕೂ ಹಣ ಕೊಡುವಂತೆ ಕೈ ಸನ್ನೆಯಲ್ಲಿ ಹೇಳಲು ಆರಂಭಿಸಿದ್ದಾಳಂತೆ! ಇದರಿಂದ ಬೇಸತ್ತು ಪತಿ ಡಿವೋರ್ಸ್ ಗೆ ಅರ್ಜಿ ಹಾಕಿದ್ದಾನೆ. ಆತನ ಮನವಿಯನ್ನು ಕೋರ್ಟ್ ಪುರಸ್ಕರಿಸಿದ್ದು, ಡಿವೋರ್ಸ್ ಅರ್ಜಿಯನ್ನು ಮನ್ನಿಸಿದೆ. ಇದರಿಂದ ಪತಿ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296