ಸರಗೂರು: ತಾಲೂಕಿನ ಲಿಂಗನೇಹಳ್ಳಿ ಗ್ರಾಮದ ರೈತರ ಜಮೀನಿಗೆ ನುಗ್ಗಿದ ಕಾಡಾನೆಗಳು ಜೋಳ, ರಾಗಿ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಬೆಳೆಯನ್ನು ನಾಶ ಮಾಡಿವೆ.
ರೈತ ಕಾರಯ್ಯ ಎಂಬುವರಿಗೆ ಸೇರಿದ ಮೂರು ಎಕರೆ ರಾಗಿ ಜೋಳ ತೋಟಕ್ಕೆ ಬುಧವಾರದಂದು ರಾತ್ರಿ ನುಗ್ಗಿದ ಗಜಪಡೆ, ರಾಗಿ ಮತ್ತು ಜೋಳ ಬೆಳೆಯನ್ನು ಹಾಳು ಮಾಡಿವೆ. ವರ್ಷ ಪೂರ್ತಿ ಹಗಲು ರಾತ್ರಿ ದುಡಿದು ಬೆಳೆದ ಬೆಳೆ ರೈತನ ಕೈಗೆ ಬಂದ ತುತ್ತು ಕೈಗೆ ಬಾರದಂತಾಗಿದೆ. ಅರಣ್ಯದಂಚಿನ ಗ್ರಾಮದ ರೈತರ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳ ಮೇಲೆ ದಾಳಿಯಿಟ್ಟು ಬೆಳೆಗಳನ್ನು ನಾಶ ಮಾಡುತ್ತಲೆ ಇವೆ . ಇದರಿಂದ ಈ ಪ್ರದೇಶದಲ್ಲಿನ ರೈತರು ಆರ್ಥಿಕ ನಷ್ಟದ ಜತೆಗೆ ನಿತ್ಯ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಜೀವಿಸಬೇಕಾಸ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರ ಬೆಳೆಗಳ ಮೇಲೆ ಆನೆಗಳು ದಾಳಿ ನಡೆಸುತ್ತಲೇ ಇವೆ. ತಡರಾತ್ರಿ ಗಜಪಡೆಗಳು ಗ್ರಾಮದ ಕಾರಯ್ಯ ಎಂಬುವರ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ರಾಗಿ ಜೋಳ ಬೆಳೆಯನ್ನು ನಾಶಪಡಿಸಿದ್ದು, ಅಲ್ಲದೇ ಉಳಿದ ರೈತರ ಜಮೀನಿನಲ್ಲಿದ್ದ ಜೋಳ, ತೆಂಗು,ಮಾವಿನ ಗಿಡಗಳನ್ನು ಕೂಡ ನೆಲಸಮ ಮಾಡಿವೆ.
ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳು ಅರಣ್ಯದಂಚಿನ ಗ್ರಾಮವಾದ್ದರಿಂದ ಆನೆಗಳು ನಿತ್ಯ ರೈತರ ಜಮೀನು ಮತ್ತು ತೋಟಗಳ ಮೇಲೆ ದಾಳಿ ಮಾಡುತ್ತಿವೆ. ರೈತರು ಮಳೆ ಇಲ್ಲದ ಕಾಲದಲ್ಲಿ ಬ್ಯಾಂಕ್‌ಗಳಲ್ಲಿ ಸಾಲ ಸೋಲ ಮಾಡಿ ಬೇಸಾಯಮಾಡಿ ಬೆಳೆದು ಬೆಳೆ ಕೈಗೆಬರುವಾಗ ದಾಳಿ ಮಾಡಿ ತಿಂದು ಹಾಕುತ್ತಿವೆ. ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದ್ದು, ಅವುಗಳ ದಾಳಿ ತಡೆಗಟ್ಟದಿದ್ದಲ್ಲಿ ರೈತರು ವಿಷ ಕುಡಿಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅಲ್ಲದೆ, ಆನೆಗಳ ದಾಳಿಯಿಂದ ನಾಶವಾಗಿರುವ ಬೆಳೆಗಳಿಗೆ ಈಗಿನ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹ ಪಡಿಸಿದ್ದಾರೆ.
ಕಿಡಿ: ಆನೆಗಳು ರೈತರ ಜಮೀನು, ತೋಟ ಮತ್ತು ಗ್ರಾಮದಂಚಿಗೆ ಬಾರದಂತೆ ಸೋಲಾರ್ ಫೆನ್ಸಿಂಗ್ ಹಾಕಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಹಲವಾರು ಬಾರಿ ಕಾಡುಪ್ರಾಣಿಗಳ ದಾಳಿ ನಡೆಯುತ್ತಿದ್ದರು ಅರಣ್ಯ ಇಲಾಖೆ ಅಧಿಕಾರಿಗಳು ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ. ಅರಣ್ಯ ಇಲಾಖೆ ಆನೆಗಳನ್ನ ಓಡಿಸಲು ಪಟಾಕಿ ಸಿಡಿಸಿ ಪ್ರಯತ್ನ ಪಡುತ್ತಿದ್ದಾರೆ, ಹೊರತು ಅವುಗಳನ್ನು ಕಾಡಿಗಟ್ಟಲು ಪ್ರಯತ್ನ ಪಡುತ್ತಿಲ್ಲ ಆನೆಗಳು ಮಾತ್ರ ಅಲ್ಲಿಂದಿಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಲೇ ರೈತರ ಬೆಳೆಗಳ ಮೇಲೆ ದಾಳಿ ನಡೆಸುತ್ತಲೇ ಇವೆ ಇಲ್ಲಿಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


